Select Your Language

Notifications

webdunia
webdunia
webdunia
webdunia

ಸಲ್ಮಾನ್ ಖಾನ್ ತಡೆದ ಏರ್ ಪೋರ್ಟ್ ಅಧಿಕಾರಿಗೆ ನೆಟ್ಟಿಗರ ಶಹಬ್ಬಾಶ್

ಸಲ್ಮಾನ್ ಖಾನ್ ತಡೆದ ಏರ್ ಪೋರ್ಟ್ ಅಧಿಕಾರಿಗೆ ನೆಟ್ಟಿಗರ ಶಹಬ್ಬಾಶ್
ಬೆಂಗಳೂರು , ಶನಿವಾರ, 21 ಆಗಸ್ಟ್ 2021 (08:46 IST)
ಬೆಂಗಳೂರು: ಬಾಲಿವುಡ್ ನಟ ಸಲ್ಮಾನ್ ಖಾನ್ ಎಂದರೆ ಸಾಮಾನ್ಯರಿಂದ ಹಿಡಿದು ಪ್ರಭಾವಿಗಳವರೆಗೂ ಅಭಿಮಾನಿಗಳಿದ್ದಾರೆ. ಆದರೆ ಅವರೆಷ್ಟೇ ದೊಡ್ಡ ನಟರಾದರೂ ಅದನ್ನು ಲೆಕ್ಕಿಸದೇ ತಮ್ಮ ಕರ್ತವ್ಯ ಮೆರೆದ ಏರ್ ಪೋರ್ಟ್ ಸಿಬ್ಬಂದಿ ಈಗ ಎಲ್ಲರ ಕಣ್ಣಲ್ಲಿ ಹೀರೋ ಆಗಿದ್ದಾರೆ.


ಸಲ್ಮಾನ್ ಖಾನ್ ಟೈಗರ್ 3 ಶೂಟಿಂಗ್ ಗೆ ವಿದೇಶಕ್ಕೆ ತೆರಳಲು ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಾಗ ಏರ್ ಪೋರ್ಟ್ ಸಿಬ್ಬಂದಿ ಅವರನ್ನು ಸಾಮಾನ್ಯ ನಾಗರಿಕರಂತೇ ತಡೆದು ಸೂಕ್ತ ದಾಖಲೆಗಳನ್ನು ಪರಿಶೀಲಿಸಲು ತಡೆದಿದ್ದಾರೆ.

ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಸಲ್ಮಾನ್ ಗೆ ಒಳಗೆ ಎಂಟ್ರಿ ಕೊಡಲಾಗಿದೆ. ಈ ರೀತಿ ಅವರು ಸೆಲೆಬ್ರಿಟಿ ಎಂಬುದನ್ನೂ ನೋಡದೇ ಸಾಮಾನ್ಯರಂತೇ ಅವರನ್ನೂ ತಪಾಸಣೆಗೊಳಪಡಿಸಿದ ಸಿಬ್ಬಂದಿಗೆ ನೆಟ್ಟಿಗರು ಶಹಬ್ಬಾಶ್ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಶೀಘ್ರದಲ್ಲಿ ಬಿಗ್ ಬಾಸ್ ಮತ್ತೊಂದು ಸೀಸನ್