Select Your Language

Notifications

webdunia
webdunia
webdunia
webdunia

ಶಿಲ್ಪಾ ಮನೆಗೆ ಬಂದ UP ಪೊಲೀಸ್?

ಶಿಲ್ಪಾ ಮನೆಗೆ ಬಂದ UP ಪೊಲೀಸ್?
ಉತ್ತರ ಪ್ರದೇಶ , ಗುರುವಾರ, 12 ಆಗಸ್ಟ್ 2021 (13:19 IST)
ಉತ್ತರಪ್ರದೇಶ : ಪತಿಯನ್ನು ಜೈಲಿನಿಂದ ಹೊರ ಕರೆತರಲು ಶಿಲ್ಪಾ ಶಟ್ಟಿ ಕಷ್ಟಪಡುತ್ತಿರುವಾಗಲೇ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ಕೋಟ್ಯಂತರ ರೂಪಾಯಿ ವಂಚಿಸಿದ ಪ್ರಕರಣದ ಆರೋಪವನ್ನು ಎದುರಿಸುತ್ತಿದ್ದಾರೆ ಬಾಲಿವುಡ್ ನಟಿ.

ಉತ್ತರಪ್ರದೇಶದಲ್ಲಿ ನಡೆದ ವಂಚನೆ ಪ್ರಕರಣವೊಂದರಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ತಾಯಿ ಸುನಂದಾ ಶೆಟ್ಟಿ ಹೆಸರು ಕೇಳಿ ಬಂದಿದ್ದು ಉತ್ತರ ಪ್ರದೇಶ ಪೊಲೀಸರು ಮುಂಬೈನ ಜುಹುವಿನಲ್ಲಿರುವ ಶಿಲ್ಪಾ ಮನೆಗೆ ಭೇಟಿ ಕೊಟ್ಟು ವಿಚಾರಣೆ ನಡೆಸಿದ್ದಾರೆ.
ಇದೇ ಪ್ರಕರಣಕ್ಕೆ ಸಂಬಂಧಿಸಿ ನೋಟಿಸ್ ಕೊಟ್ಟು ವಿಚಾರಣೆ ನಡೆಸಲು ಉತ್ತರ ಪ್ರದೇಶ ಪೊಲೀಸರು ಬುಧವಾರ ಶಿಲ್ಪಾ ಶೆಟ್ಟಿ ಮನೆಗೆ ಬಂದಿರುವುದು ಈಗ ತಿಳಿದು ಬಂದಿದೆ. ಈಗಾಗಲೇ ಪತಿಯನ್ನು ಜೈಲಿನಿಂದ ಬಿಡಿಸಲು ಕಷ್ಟಪಡುತ್ತಿರುವ ಮಧ್ಯೆ ಶಿಲ್ಪಶೆಟ್ಟಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ಪತಿಯ ಬಂಧನದ ನಂತರ ಶಿಲ್ಪ ಶೆಟ್ಟಿ ಬಹಳಷ್ಟು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಪತಿಯ ಬೇಲ್ಗೆ ಪ್ರಯತ್ನಿಸುವುದರ ಜೊತೆಗೆ ಒಬ್ಬರೇ ಈಗ ಮಕ್ಕಳನ್ನು ನೋಡಿಕೊಳ್ಳಬೇಕಾಗಿದೆ. ಈಗ ವಂಚನೆ ಪ್ರಕರಣವೂ ಸೇರಿಕೊಂಡಿದ್ದು ಶಿಲ್ಪಾಗೆ ಕಷ್ಟದ ಸಮಯವಾಗಿದೆ.
webdunia

ಲಕ್ನೋ ಪೊಲೀಸರ ತಂಡವೊಂದು ಮುಂಬೈಗೆ ಬಂದಿದ್ದು ಶಿಲ್ಪಾ ಶೆಟ್ಟಿಗೆ ನೋಟಿಸ್ ಕೊಟ್ಟಿದ್ದು ನಟಿ ಹಾಗೂ ಅವರ ತಾಯಿ ಸುನಂದಾ ಶೆಟ್ಟಿ ಅವರನ್ನು ವಿಚಾರಣೆ ನಡೆಸಲಿದೆ.
ಶಿಲ್ಪಾ ಶೆಟ್ಟಿ ಅವರು ಲೋಸಿಸ್ ವೆಲ್ನೆಸ್ ಸೆಂಟರ್ ಎಂಬ ಫಿಟ್ನೆಸ್ ಚೈನ್ ನಡೆಸುತ್ತಿದ್ದಾರೆ. ನಟಿಯೇ ಈ ಕಂಪನಿಯ ಚೇರ್ಮೆನ್ ಕೂಡಾ ಆಗಿದ್ದಾರೆ. ಅವರ ತಾಯಿ ಸುನಂದಾ ಶೆಟ್ಟಿ ಇದರ ನಿರ್ದೇಶಕಿಯಾಗಿದ್ದಾರೆ.
webdunia

ಶಿಲ್ಪಾ ಶೆಟ್ಟಿ ಹಾಗೂ ಸುನಂದಾ ಅವರು ಹೊಸ ಬ್ರಾಂಚ್ ತೆರೆಯುವುದಾಗಿ ಕೋಟ್ಯಂತರ ರೂಪಾಯಿ ಪಡೆದಿದ್ದರೂ, ಇನ್ನೂ ಖಾತೆ ತೆರೆದಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಪ್ರಕರಣದಲ್ಲಿ ಒಮ್ಯಾಕ್ಸ್ ಹೈಟ್ಸ್ ನಿವಾಸಿ ಜ್ಯೋತ್ಸ್ನಾ ವಂಚನೆ ಕೇಸು ನೀಡಿದ್ದಾರೆ
ಶಿಲ್ಪಾ ಶೆಟ್ಟಿ ಮತ್ತು ಆಕೆಯ ತಾಯಿಗೆ ಹಜರತ್ಗಂಜ್ ಪೊಲೀಸರು ಮತ್ತು ವಿಭೂತಿ ಖಾಂಡ್ ಪೊಲೀಸರು ವಿಚಾರಣೆಗೆ ನೋಟಿಸ್ ಕಳುಹಿಸಿದ್ದಾರೆ. ಈ ಪ್ರಕರಣದ ತನಿಖಾಧಿಕಾರಿ ಡಿಸಿಪಿ ಸಂಜೀವ್ ಸುಮನ್ ಸೋಮವಾರ ನಟಿ ಶಿಲ್ಪಾ ಶೆಟ್ಟಿ ಮತ್ತು ಆಕೆಯ ತಾಯಿ ಸುನಂದಾ ಅವರ ವಿಚಾರಣೆಗೆ ಮುಂಬೈಗೆ ತೆರಳಲಿದ್ದಾರೆ ಎಂದು ಹೇಳಿದ್ದಾರೆ.
ಈ ವಿಷಯವು ಉನ್ನತ ಮಟ್ಟದದ್ದಾಗಿದೆ. ಆದ್ದರಿಂದ ಪೊಲೀಸರು ಎಲ್ಲಾ ಅಂಶಗಳನ್ನು ಸೂಕ್ಷ್ಮವಾಗಿ ತನಿಖೆ ಮಾಡುತ್ತಿದ್ದಾರೆ ಎಂದು ಸಂಜೀವ್ ಸುಮನ್ ಹೇಳಿದ್ದಾರೆ
ನಟಿ ಶಿಲ್ಪಾ ಶೆಟ್ಟಿ ಮನೆಮುಂದೆ ನಿಂತಿದ್ದ ಉತ್ತರ ಪ್ರದೇಶ ಪೊಲೀಸರು ತಂಡ ವಿಚಾರಣೆಗೆ ಸಂಬಂಧಿಸಿ ನೋಟಿಸ್ ತೋರಿಸುತ್ತಿರುವುದು. ಮುಂಬೈನ ಜುಹು ಪ್ರದೇಶದಲ್ಲಿ ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾ ಬಂಗಲೆ ಇದೆ


Share this Story:

Follow Webdunia kannada

ಮುಂದಿನ ಸುದ್ದಿ

ವಿಜಯ್ ರಾಘವೇಂದ್ರ ಸೀತಾರಾಮ್ ಬಿನೋಯ್ ದಿಗಂತ್ ಗೆ ಯಾಕೆ ಸ್ಪೆಷಲ್?!