Publish Date: Tue, 03 Aug 2021 (09:28 IST)
Updated Date: Tue, 03 Aug 2021 (09:29 IST)
ಮುಂಬೈ: ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಪತಿ, ಉದ್ಯಮಿ ರಾಜ್ ಕುಂದ್ರಾ ಬಂಧನದ ಕುರಿತು ತಮ್ಮನ್ನು ಟಾರ್ಗೆಟ್ ಮಾಡುತ್ತಿರುವವರಿಗೆ ಶಿಲ್ಪಾ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ನಿನ್ನೆ ಉತ್ತರ ನೀಡಿದ್ದರು.
ಆದರೆ ಶಿಲ್ಪಾ ಶೆಟ್ಟಿ ಸುದೀರ್ಘ ಹೇಳಿಕೆಗೆ ಪ್ರತಿಕ್ರಿಯಿಸಿರುವ ನೆಟ್ಟಿಗರು ನಟಿಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಈ ವಿಚಾರ ಇನ್ನೂ ವಿಚಾರಣೆ ಹಂತದಲ್ಲಿರುವಾಗಲೇ ನನ್ನ ಮತ್ತು ನನ್ನ ಕುಟುಂಬದವರನ್ನು ಪ್ರಕರಣದಲ್ಲಿ ಅನವಶ್ಯಕವಾಗಿ ಎಳೆದು ತರಲಾಗುತ್ತಿದೆ. ನಮ್ಮ ಖಾಸಗಿತನಕ್ಕೆ ಗೌರವ ನೀಡಿ ಎಂದು ಶಿಲ್ಪಾ ಹೇಳಿಕೆ ನೀಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ನೆಟ್ಟಿಗರು, ನಿಮ್ಮ ಪತಿಯ ಕೆಲಸಕ್ಕೂ ನಿಮಗೂ ಸಂಬಂಧವೇ ಇಲ್ಲದವರಂತೆ ಮಾತನಾಡುತ್ತೀರಲ್ಲ? ನಿಮ್ಮ ಪತಿ ಮಾಡುವ ಕೆಲಸಗಳು ನಿಮಗೆ ಗೊತ್ತಿರಲಿಲ್ಲವೇ? ಎಂದು ಕೆಲವರು ಕೇಳಿದರೆ ಮತ್ತೆ ಕೆಲವರು ನಿಮ್ಮ ಪತಿಯ ಕೆಲಸದಿಂದ ತೊಂದರೆಗೊಳಗಾದ ಯುವತಿಯರ ಕತೆ ಏನು ಎಂದು ಪ್ರಶ್ನಿಸಿದ್ದಾರೆ. ಮತ್ತೆ ಕೆಲವರು ನೀವು ಸಾರ್ವಜನಿಕ ಜೀವನದಲ್ಲಿದ್ದೀರಿ, ಪ್ರಚಾರದ ಲಾಭ ಪಡೆದಿದ್ದೀರಿ. ಈಗ ಅದರ ದುರ್ಲಾಭವನ್ನೂ ಎದುರಿಸಲು ಸಿದ್ಧರಾಗಿ ಎಂದು ತಿರುಗೇಟು ನೀಡಿದ್ದಾರೆ.