ಮುಂಬೈ: ಪತಿ ರಾಜ್ ಕುಂದ್ರಾ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಮಾಧ‍್ಯಮಗಳು, ಸಾಮಾಜಿಕ ಜಾಲತಾಣಗಳಲ್ಲಿ ತನ್ನ ವಿರುದ್ಧ ಆಕ್ಷೇಪಾರ್ಹ ಸುದ್ದಿ ಪ್ರಕಟಿಸಲಾಗುತ್ತಿದೆ ಎಂದು ಆರೋಪಿಸಿ ಅವುಗಳ ವಿರುದ್ಧ ನಟಿ ಶಿಲ್ಪಾ ಶೆಟ್ಟಿ ಬಾಂಬೆ ಹೈಕೋರ್ಟ್ ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು.
									
										
								
																	 
25 ಕೋಟಿ ರೂ. ನಷ್ಟ ಪರಿಹಾರ ಕೋರಿ ಶಿಲ್ಪಾ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಇದರ ವಿಚಾರಣೆ ನಡೆಸಿದ ಕೋರ್ಟ್ ಪೊಲೀಸ್ ವರದಿ ಆಧರಿಸಿ ಮಾಧ್ಯಮಗಳು ಮಾಡುವ ವರದಿಗಳನ್ನು ಆಕ್ಷೇಪಾರ್ಹ ಎನ್ನಲು ಸಾಧ್ಯವಿಲ್ಲ ಎಂದಿದೆ.
									
			
			 
 			
 
 			
			                     
							
							
			        							
								
																	ನೀವು ಸಾರ್ವಜನಿಕ ಜೀವನದಲ್ಲಿದ್ದು, ಸೆಲೆಬ್ರಿಟಿಯಾಗಿರುವುದರಿಂದ ನಿಮ್ಮ ಮೇಲೆ ಸಮಾಜದ ಕಣ್ಣು ಇದ್ದೇ ಇರುತ್ತದೆ. ಇದು ಮಾಧ್ಯಮ ಸ್ವಾತಂತ್ರ್ಯ ಹರಣವೆನಿಸುತ್ತದೆ. ಇದನ್ನು ಮಾನನಷ್ಟ ಮೊಕದ್ದಮೆಯಡಿಯಲ್ಲಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ.