ಮುಂಬೈ: ಉದ್ಯಮಿ ರಾಜ್ ಕುಂದ್ರಾ ಅಶ್ಲೀಲ ಸಿನಿಮಾ ನಿರ್ಮಾಣ ಪ್ರಕರಣದಲ್ಲಿ ಬಂಧಿತರಾಗಿದ್ದರೆ, ಇತ್ತ ಸಲ್ಮಾನ್ ಖಾನ್ ಮಾಜಿ ಪ್ರೇಯಸಿ ಸೋಮಿ ಇಂತಹ ಸಿನಿಮಾ ಮಾಡುವುದು ತಪ್ಪಲ್ಲ ಎಂದು ಎಲ್ಲರೂ ಹುಬ್ಬೇರುವಂತಹ ಹೇಳಿಕೆ ನೀಡಿದ್ದಾರೆ.
ಇಂತಹ ಸಿನಿಮಾದಲ್ಲಿ ಸಿಲುಕಿಕೊಂಡ ಸಾಕಷ್ಟು ಮಂದಿಯ ಹೆಸರು ಬಹಿರಂಗಗೊಳ್ಳುತ್ತಿರುವ ಬೆನ್ನಲ್ಲೇ ಸೋಮಿ ಇಂತಹ ಸಿನಿಮಾದಲ್ಲಿ ಅಭಿನಯಿಸುವುದು ತಪ್ಪು ಎಂದವರು ಯಾರು ಎಂದು ಪ್ರಶ್ನೆ ಮಾಡಿದ್ದಾರೆ.
ಮಹಿಳೆಯರು ಇಷ್ಟಪಟ್ಟು ಅಂತಹ ಸಿನಿಮಾ ಮಾಡಿದರೆ ತಪ್ಪೇನಿಲ್ಲ. ಒಂದು ವೇಳೆ ಬಲವಂತವಾಗಿ ಮಾಡಿಸಿದರೆ ತಪ್ಪು. ಅವರೇ ಆ ಕ್ಷೇತ್ರವನ್ನು ಆರಿಸಿಕೊಂಡರೆ ತಪ್ಪೇನು? ಎಂದು ಪ್ರಶ್ನೆ ಮಾಡಿದ್ದರೆ.