ಮುಂಬೈ: ಬಾಲಿವುಡ್ ಬಿಗ್ ಬಿ ಬಚ್ಚನ್ ಮನೆ ಸೊಸೆ, ಐಶ್ವರ್ಯಾ ರೈ ಬಚ್ಚನ್ ಮತ್ತೆ ತಾಯಿಯಾಗುತ್ತಿದ್ದಾರಾ? ಇಂತಹದ್ದೊಂದು ಅನುಮಾನಕ್ಕೆ ಕಾರಣವಾಗಿರುವುದು ಲೇಟೆಸ್ಟ್ ಫೋಟೋ.
ನಟ ಶರತ್ ಕುಮಾರ್ ಮಗಳು ವರಲಕ್ಷ್ಮಿ ಜೊತೆಗೆ ಐಶ್ ಪೋಸ್ ನೀಡಿರುವ ಫೋಟೋ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಫೋಟೋದಲ್ಲಿ ಐಶ್ ಬೇಬ್ ಉಬ್ಬು ಹೊಟ್ಟೆ ನೋಡಿ ನೆಟ್ಟಿಗರು ಅವರು ಮತ್ತೆ ಗರ್ಭಿಣಿಯಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ಕಪ್ಪು ಬಣ್ಣದ ಔಟ್ ಫಿಟ್ ನಲ್ಲಿರುವ ಐಶ್ವರ್ಯಾ ಹೊಟ್ಟೆ ಕೊಂಚ ಉಬ್ಬಿದಂತಿದೆ. ಇದನ್ನು ನೋಡಿ ಅವರು ಮತ್ತೆ ಗರ್ಭಿಣಿ ಇರಬಹುದಾ ಎಂಬ ಗಾಸಿಪ್ ಹರಡಿದೆ. ಐಶ್-ಅಭಿಷೇಕ್ ದಂಪತಿಗೆ ಈಗಾಗಲೇ 11 ವರ್ಷದ ಹೆಣ್ಣು ಮಗುವಿದೆ.