Publish Date: Fri, 20 Aug 2021 (10:14 IST)
Updated Date: Fri, 20 Aug 2021 (10:16 IST)
ಬೆಂಗಳೂರು: ಬಹುನಿರೀಕ್ಷಿತ ಕೆಜಿಎಫ್ 2 ಸಿನಿಮಾದ ಸ್ಯಾಟ್ ಲೈಟ್ ಹಕ್ಕು ಕಿರುತೆರೆಯ ನಂ.1 ವಾಹಿನಿ ಜೀ ಕನ್ನಡ ಪಾಲಾಗಿದೆ. ವರಮಹಾಲಕ್ಷ್ಮಿ ಹಬ್ಬದ ದಿನವೇ ಹೊಂಬಾಳೆ ಫಿಲಂಸ್ ಈ ಭರ್ಜರಿ ಸುದ್ದಿ ಕೊಟ್ಟಿದೆ.
ವರಮಹಾಲಕ್ಷ್ಮಿ ಹಬ್ಬದ ದಿನ ಜೀ ಕನ್ನಡ ವಾಹಿನಿ ಹಾಗೂ ಹೊಂಬಾಳೆ ಫಿಲಂಸ್ ಪ್ರಕಟಣೆ ನೀಡಿದೆ. ಈ ಸಂಬಂಧ ಹೊಂಬಾಳೆ ಫಿಲಂಸ್ ನಿರ್ಮಾಣ ಸಂಸ್ಥೆಯೊಂದಿಗೆ ಜೀ ವಾಹಿನಿ ಒಪ್ಪಂದಕ್ಕೆ ಸಹಿ ಹಾಕಿದೆ.
ಭಾರೀ ಮೊತ್ತಕ್ಕೆ ಕೆಜಿಎಫ್ 2 ಸ್ಯಾಟ್ ಲೈಟ್ ಹಕ್ಕು ಖರೀದಿಯಾಗಿದೆ ಎನ್ನಲಾಗಿದೆ. ನಿರ್ಮಾಪಕ ವಿಜಯ್ ಕಿರಗಂದೂರ್ ಒಪ್ಪಂದ ಪತ್ರವನ್ನು ಜೀ ಕನ್ನಡ ವಾಹಿನಿ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರ್ ಅವರಿಗೆ ಹಸ್ತಾಂತರಿಸಿದ್ದಾರೆ. ಕೇವಲ ಕನ್ನಡ ಮಾತ್ರವಲ್ಲದೆ, ತಮಿಳು, ತೆಲುಗು, ಮಲಯಾಳಂ ಭಾಷೆಗಳ ಸ್ಯಾಟ್ ಲೈಟ್ ಹಕ್ಕೂ ಕೂಡಾ ಜೀ ಟಿವಿ ಪಾಲಾಗಿದೆ.