ಬೆಂಗಳೂರು: ಜನಪ್ರಿಯ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಸದ್ಯದಲ್ಲೇ ಆರಂಭವಾಗಲಿದೆ ಎಂದು ಈಗಾಗಲೇ ಸುದ್ದಿ ಸಿಕ್ಕಿತ್ತು.
ಇದೀಗ ಈ ಸುದ್ದಿ ಕನ್ ಫರ್ಮ್ ಆಗಿದೆ. ಕಲರ್ಸ್ ಕನ್ನಡ ವಾಹಿನಿ ಮುಖ್ಯಸ್ಥ ಪರಮೇಶ್ವರ್ ಗುಂಡ್ಕಲ್ ಬಿಗ್ ಬಾಸ್ 9 ಶುರು ಮಾಡುತ್ತಿರುವುದರ ಬಗ್ಗೆ ಸುಳಿವು ನೀಡಿದ್ದಾರೆ.
ಬಿಗ್ ಬಾಸ್ 9 ಕ್ಕೆ ಬೇಕಾದ ಮನೆ ಸೆಟ್ ಅಪ್ ಮಾಡಲಾಗುತ್ತಿದೆ ಎಂದು ಪರಮೇಶ್ವರ್ ಗುಂಡ್ಕಲ್ ಹೇಳಿದ್ದಾರೆ. ಆಗಸ್ಟ್ ನಲ್ಲಿ ಹೊಸ ಸೀಸನ್ ಆರಂಭವಾಗುವ ನಿರೀಕ್ಷೆಯಿದೆ.