Publish Date: Wed, 06 Jul 2022 (10:10 IST)
Updated Date: Wed, 06 Jul 2022 (10:18 IST)
ಬೆಂಗಳೂರು: ಕಿಚ್ಚ ಸುದೀಪ್ ವೃತ್ತಿ ಜೀವನಕ್ಕೆ ತಿರುವು ಕೊಟ್ಟ ಸಿನಿಮಾ ಹುಚ್ಚ. ಈ ಸಿನಿಮಾವನ್ನು ಇಂದಿಗೂ ಜನ ನೆನೆಸಿಕೊಳ್ಳುತ್ತಾರೆ. ಈ ಸಿನಿಮಾಗೆ ಈಗ 21 ವರ್ಷಗಳಾಗಿವೆ.
ಹುಚ್ಚ ಸಿನಿಮಾ ಬಿಡುಗಡೆಯಾಗಿ 21 ವರ್ಷಗಳಾದ ಹಿನ್ನಲೆಯಲ್ಲಿ ಕಿಚ್ಚ ಸುದೀಪ್ ಸಿನಿಮಾ ಪೋಸ್ಟರ್ ನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಇದು ನನ್ನ ಜೀವನದ ಸುಂದರ ದಿನ ಎಂದಿದ್ದಾರೆ ಸುದೀಪ್.
ಇನ್ನು, ಇದೇ ದಿನ ತೆಲುಗಿನಲ್ಲಿ ರಾಜಮೌಳಿ ನಿರ್ದೇಶನದಲ್ಲಿ ಸುದೀಪ್ ಅಭಿನಯಿಸಿದ್ದ ಸೂಪರ್ ಹಿಟ್ ಸಿನಿಮಾ ಈಗ ಕೂಡಾ ಬಿಡುಗಡೆಯಾಗಿತ್ತು. ಈ ಸಿನಿಮಾ ಬಿಡುಗಡೆಯಾಗಿ ಇಂದಿಗೆ 10 ವರ್ಷಗಳಾಗಿವೆ. ಈ ಎರಡೂ ಸಿನಿಮಾಗಳು ನನ್ನ ಪಾಲಿಗೆ ವಿಶೇಷ ಎಂದು ಕಿಚ್ಚ ಹೇಳಿಕೊಂಡಿದ್ದಾರೆ.