Publish Date: Tue, 05 Jul 2022 (09:00 IST)
Updated Date: Tue, 05 Jul 2022 (09:21 IST)
ಬೆಂಗಳೂರು: ಕೆಜಿಎಫ್ 2 ಸಿನಿಮಾ ಬಂದ ಮೇಲೆ ರಾಕಿಂಗ್ ಸ್ಟಾರ್ ಯಶ್ ಸ್ಟಾರ್ ವಾಲ್ಯೂ ಹೆಚ್ಚಾಗಿದೆ. ಯಶ್ ಜೊತೆ ಸಿನಿಮಾ ಮಾಡಲು ಪರಭಾಷೆ ನಿರ್ಮಾಪಕರು, ನಿರ್ದೇಶಕರೂ ತುದಿಗಾಲಲ್ಲಿ ನಿಂತಿದ್ದಾರೆ.
ಯಶ್ ಇದುವರೆಗೆ ತಮ್ಮ ಮುಂಬರುವ ಸಿನಿಮಾ ಬಗ್ಗೆ ಇದುವರೆಗೆ ಎಲ್ಲೂ ಬಾಯ್ಬಿಟ್ಟಿಲ್ಲ. ಆದರೆ ನಿರ್ದೇಶಕ ನರ್ತನ್ ಜೊತೆ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿಯಿದೆ.
ಅದಲ್ಲದೆ, ಮೂವರು ಘಟಾನುಘಟಿ ನಿರ್ದೇಶಕರು ಯಶ್ ಜೊತೆ ಸಿನಿಮಾ ಮಾಡಲಿದ್ದಾರಂತೆ. ರಜನೀಕಾಂತ್ ಗೆ ರೋಬೋಟ್ ನಂತಹ ಹಿಟ್ ಚಿತ್ರ ಕೊಟ್ಟ ನಿರ್ದೇಶಕ ಶಂಕರ್, ಪ್ರಶಾಂತ್ ನೀಲ್, ನಿರ್ಮಾಪಕ ದಿಲ್ ರಾಜು ಜೊತೆ ಯಶ್ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿಯಿದೆ. ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಬಂದಿಲ್ಲ.