ಬೆಂಗಳೂರು: ಕಿಚ್ಚ ಸುದೀಪ್ ಆನ್ ಲೈನ್ ಗೇಮ್ ನ ಜಾಹೀರಾತೊಂದರ ರಾಯಭಾರಿಯಾಗಿರುವುದು ಎಲ್ಲರಿಗೂ ಗೊತ್ತೇ ಇದೆ. ಈ ವಿಚಾರಕ್ಕೆ ಸಾಕಷ್ಟು ಬಾರಿ ಅವರು ವಿವಾದಕ್ಕೊಳಗಾಗಿದ್ದು ಇದೆ.
ಇದೀಗ ಯುವಕನೊಬ್ಬ ಸಾಮಾಜಿಕ ಜಾಲತಾಣದಲ್ಲಿ ಸುದೀಪ್ ರನ್ನು ವಾಚಮಗೋಚರವಾಗಿ ನಿಂದಿಸಿದ್ದಾನೆ. ಆನ್ ಲೈನ್ ಗೇಮ್ ನ ಗೀಳಿಗೆ ಬಿದ್ದ ಅಪ್ಪ, ಮಗನನ್ನೇ ಕೊಲೆ ಮಾಡಿದ ಸುದ್ದಿಯನ್ನು ಓದಿದೆ. ಕಿಚ್ಚ ಸುದೀಪ್ ನಂತಹ ನಟರು ಇಂತಹ ಆನ್ ಲೈನ್ ಗೇಮ್ ನನ್ನು ಪ್ರಚಾರ ಮಾಡುವುದರಿಂದಲೇ ಇಂತಹ ಅನಾಹುತಗಳು ನಡೆಯುತ್ತಿವೆ. ಕಿಚ್ಚ ಸುದೀಪ ನೀನು ಮಾತ್ರ ಅಲ್ಲ ನಿನ್ನ ಅಭಿಮಾನಿಗಳೂ ಷಂಡರು ಎಂದು ಹೀನಾಯವಾಗಿ ಮಾತನಾಡಿದ್ದಾನೆ.
ಈ ವಿಡಿಯೋ ಕಿಚ್ಚನ ಅಭಿಮಾನಿಗಳನ್ನು ಕೆರಳಿಸಿದೆ. ಕಿಚ್ಚ ಸುದೀಪ್ ಅಭಿಮಾನಿಯೂ ಆಗಿರುವ ನಿರ್ದೇಶಕ ನಂದಕಿಶೋರ್ ಲೈವ್ ಬಂದು ಈ ಯುವಕನಿಗೆ ಜಾಡಿಸಿದ್ದಾರೆ. ಸುದೀಪ್ ಕನ್ನಡದ ಮೇರು ನಟ. ಅವರಿಂದಾಗಿ ಎಷ್ಟೋ ಜನರಿಗೆ ಸಹಾಯವಾಗಿದೆ. ಸುದೀಪ್ ರಿಂದಲೇ ಆ ಹುಡುಗನ ಸಾವಾಗಿದೆ ಎಂದು ಯಾರಾದರೂ ದೂರು ಕೊಟ್ಟಿದ್ದಾರೆಯೇ? ವಿನಾಕಾರಣ ಸುದೀಪ್ ಬಗ್ಗೆ ಹೀನಾಯವಾಗಿದ್ದು ಮಾತನಾಡಿದ್ದಕ್ಕೆ ನಿನಗೆ ನಾಚಿಕೆಯಾಗಬೇಕು ಎಂದು ತಿರುಗೇಟು ಕೊಟ್ಟಿದ್ದಾರೆ.