Publish Date: Sun, 03 Jul 2022 (09:48 IST)
Updated Date: Sun, 03 Jul 2022 (09:50 IST)
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಒಂದು ಕಾಲದಲ್ಲಿ ಹೀರೋಯಿನ್ ಆಗಿ ಮಿಂಚಿದ್ದ ಎವರ್ ಗ್ರೀನ್ ನಟಿ ಸುಧಾರಾಣಿ ಈಗ ಕಿರುತೆರೆಗೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ.
ಜೀ ಕನ್ನಡದಲ್ಲಿ ಪ್ರಸಾರವಾಗಲಿರುವ ಹೊಸ ಧಾರವಾಹಿ ಶ್ರೀರಸ್ತು ಶುಭಮಸ್ತು ಧಾರವಾಹಿ ಮೂಲಕ ಸುಧಾರಾಣಿ ಕಿರುತೆರೆಯಲ್ಲಿ ಪ್ರಮುಖ ಪಾತ್ರ ಮಾಡಲಿದ್ದಾರೆ.
ಈ ಮೊದಲು ಜೀ ಕನ್ನಡ ವಾಹಿನಿಯಲ್ಲಿ ಜೊತೆ ಜೊತೆಯಲಿ ಧಾರವಾಹಿಯ ಕೆಲವು ಎಪಿಸೋಡ್ ಗಳಲ್ಲಿ ಅಭಿನಯಿಸಿದ್ದರು. ಇದೀಗ ಅದೇ ಜೀ ವಾಹಿನಿಯಲ್ಲಿ ಮತ್ತೊಂದು ಧಾರವಾಹಿ ಮೂಲಕ ಪ್ರಮುಖ ಪಾತ್ರದಲ್ಲಿ ಮಿಂಚಲಿದ್ದಾರೆ. ಸದ್ಯದಲ್ಲೇ ಧಾರವಾಹಿಯ ಪ್ರಸಾರ ದಿನಾಂಕ ಪ್ರಕಟವಾಗಲಿದೆ.