Select Your Language

Notifications

webdunia
webdunia
webdunia
webdunia

ಅಕ್ರಮ ಆಸ್ತಿ ಸಂಪಾದನೆ ಪೊಲೀಸಪ್ಪ ಜೈಲುಶಿಕ್ಷೆ

ಅಕ್ರಮ ಆಸ್ತಿ ಸಂಪಾದನೆ ಪೊಲೀಸಪ್ಪ ಜೈಲುಶಿಕ್ಷೆ
ಬೆಂಗಳೂರು , ಶನಿವಾರ, 2 ಜುಲೈ 2022 (16:17 IST)
ಆದಾಯ ಮೀರಿ ಅಕ್ರಮ ಆಸ್ತಿಯನ್ನು ಸಂಪಾದನೆ ಮಾಡಿದ್ದ ಎಸ್ಪಿಯನ್ನು 2007ರಲ್ಲಿ ಲೋಕಾಯುಕ್ತ ಬಲೆಗೆ ಕೆಡವಿತ್ತು. ಯಲಹಂಕದ ಶಸಸ್ತ್ರ ಪೊಲೀಸ್ ತರಬೇತಿ ಶಾಲೆಯ ಎಸ್ಪಿಯಾಗಿದ್ದ ಶ್ರೀನಿವಾಸ್ ಐಯ್ಯರ್ ಮನೆ ಮೇಲೆ ದಾಳಿ ನಡೆಸಿದ್ದ ವೇಳೆ 53.58ರಷ್ಟು ಆದಾಯ ಮೀರಿದ ಆಸ್ತಿ ಪತ್ತೆಯಾಗಿತ್ತು.
ಎಸ್ಪಿ ಶ್ರೀನಿವಾಸ್ ಐಯ್ಯರ್ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ನವೆಂಬರ್ 03,2007ರಲ್ಲಿ ದಾಳಿಯನ್ನು ನಡೆಸಿದ್ದರು. ಲೋಕಾಯುಕ್ತ ಅಧಿಕಾರಿಗಳು ಶೋಧ ಕಾರ್ಯವನ್ನು ನಡೆಸಿದ್ದರು. ತನಿಖೆಯು ಪೂರ್ಣಗೊಂಡ ನಂತರ ಆರೋಪಿ ಶ್ರೀನಿವಾಸ್ ಐಯ್ಯರ್ ಆದಾಯಕ್ಕಿಂತ 40,60,324,41 ರೂಪಾಯಿ ಮೌಲ್ಯದ ಆಸ್ತಿ ಪತ್ತೆಯಾಗಿತ್ತು. ಅಂದರೆ ಶೇ 53.58ರಷ್ಟು ಅಕ್ರಮ ಆಸ್ತಿಯನ್ನು ಹೊಂದಿದ್ದು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನು ಸಲ್ಲಿಸಲಾಗಿತ್ತು.
 
1,00,000,00 ದಂಡ. ನಾಲ್ಕು ವರ್ಷ ಜೈಲು ; ವಿಚಾರಣೆ ಪೂರ್ಣಗೊಳಿಸಿದೆ 77ನೇ ಸಿಟಿ ಸಿವಿಲ್ ಮತ್ತು ಸೆಷನ್ ನ್ಯಾಯಾಧೀಶರು (ಸಿಸಿಹೆಚ್ 78) ಮತ್ತು ವಿಶೇಷ ನ್ಯಾಯಾಧೀಶರಾದ ಎಸ್ ವಿ. ಶ್ರೀಕಾಂತ್ ಆರೋಪಿತರಿಗೆ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ 1988ಕಲಂ 13(1)(ಇ) ಸಹವಾಚನ 13(2) ಪ್ರಕಾರ ಸಾದ ಸಾಜೆ, ಮತ್ತು ರೂ 1,00,000,00 (ಒಂದು ಕೋಟಿ) ದಂಡವನ್ನು ವಿಧಿಸಲಾಗಿದೆ. ದಂಡ ವಿಧಿಸಲು ತಪ್ಪಿದ್ದಲ್ಲಿ 2 ವರ್ಷ ಸಾದ ಸಜೆಯನ್ನು ಅನುಭವಿಸಬೇಕೆಂದು ಆದೇಶವನ್ನು ನೀಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಮೋದಿ ಬಂದ ರಸ್ತೆ ಈಗ ಅಪಾಯಕಾರಿ