ಬೆಂಗಳೂರು: ಸ್ಯಾಂಡಲ್ ವುಡ್ ನಟ ಪ್ರಜ್ವಲ್ ದೇವರಾಜ್ ಜುಲೈ 4 ರಂದು ಜನ್ಮದಿನ ಆಚರಿಸಿಕೊಳ್ಳಲಿದ್ದಾರೆ. ಆದರೆ ಈ ಬಾರಿ ಅಭಿಮಾನಿಗಳ ಜೊತೆ ಅದ್ಧೂರಿಯಾಗಿ ಬರ್ತ್ ಡೇ ಆಚರಿಸಿಕೊಳ್ಳದೇ ಇರಲು ತೀರ್ಮಾನಿಸಿದ್ದಾರೆ.
ಇದಕ್ಕೆ ಅವರು ಕೊಟ್ಟ ಕಾರಣ ನೋಡಿ ಅಭಿಮಾನಿಗಳು ಭಾವುಕರಾಗಿದ್ದಾರೆ. ಪ್ರಜ್ವಲ್ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ವಿಡಿಯೋ ಸಂದೇಶ ನೀಡಿದ್ದು, ಪ್ರತೀ ಬಾರಿ ನೀವು ನನ್ನ ಮನೆ ಹತ್ತಿರ ಬಂದು ನಿಮ್ಮದೇ ಜನ್ಮದಿನದಂತೆ ಸಂಭ್ರಮಿಸುತ್ತೀರಿ. ಆದರೆ ಈ ಬಾರಿ ನನಗೆ ಅದ್ಧೂರಿ ಜನ್ಮದಿನ ಆಚರಣೆ ಮಾಡಲು ಇಷ್ಟವಿಲ್ಲ.
ಕಾರಣ, ನೀವು ನನ್ನ ಮೇಲೆ ಎಷ್ಟು ಕಾಳಜಿ ಹೊಂದಿದ್ದೀರೋ ನಾನೂ ನಿಮ್ಮ ಬಗ್ಗೆ ಅಷ್ಟೇ ಕಾಳಜಿ ಹೊಂದಿದ್ದೇನೆ. ಇತ್ತೀಚೆಗೆ ನಾನು ತುಂಬಾ ಇಷ್ಟಪಡುತ್ತಿದ್ದ ನನ್ನ ಅಭಿಮಾನಿ ಯುವಕನ ಸಾವಾಗಿದೆ. ಹೀಗಾಗಿ ಅವನ ಸಾವಿನ ಬೇಸರದಲ್ಲಿರುವಾಗ ಬರ್ತ್ ಡೇ ಆಚರಿಸಿ ಸಂಭ್ರಮಿಸಲು ಇಷ್ಟಪಡಲ್ಲ. ಹೀಗಾಗಿ ಈ ಬಾರಿ ಬರ್ತ್ ಡೇ ಆಚರಿಸಿಕೊಳ್ಳುತ್ತಿಲ್ಲ ಎಂದಿದ್ದಾರೆ ಪ್ರಜ್ವಲ್. ಅವರು ನೀಡಿದ ಕಾರಣ ನೋಡಿ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.