Publish Date: Sat, 02 Jul 2022 (08:20 IST)
Updated Date: Sat, 02 Jul 2022 (08:59 IST)
ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಬಹುಭಾಷಾ ಸಿನಿಮಾ ವಿಕ್ರಾಂತ್ ರೋಣ ಸಿನಿಮಾ ಕಡೆಯಿಂದ ಇಂದು ಅಭಿಮಾನಿಗಳಿಗೆ ಹೊಸ ಅಪ್ ಡೇಟ್ ಸಿಗುತ್ತಿದೆ.
ಸಿನಿಮಾದ ರಾ ರಾ ರಕ್ಕಮ್ಮ ಹಾಡು ಬಿಡುಗಡೆಯಾಗಿ ಸೋಷಿಯಲ್ ಮೀಡಿಯಾದಲ್ಲಿ ಹೊಸ ಟ್ರೆಂಡ್ ಆಗಿತ್ತು. ಇದೀಗ ಚಿತ್ರದ ಎರಡನೇ ಹಾಡು ಬಿಡುಗಡೆಗೆ ಸಿದ್ಧವಾಗಿದೆ.
ವಿಕ್ರಾಂತ್ ರೋಣ ಸಿನಿಮಾದ ಕಿಚ್ಚ ಸುದೀಪ್ ಅವರ ಫೇವರಿಟ್ ಲಾಲಿ ಹಾಡಿನ ಕನ್ನಡ ಅವತರಣಿಕೆ ಇಂದು 5.02 ಕ್ಕೆ ಬಿಡುಗಡೆಯಾಗುತ್ತಿದೆ. ಈ ಹಾಡು ಅಪ್ಪ-ಮಗಳ ನಡುವಿನ ಮಧುರ ಬಾಂಧವ್ಯದ ಹಾಡು. ಹೀಗಾಗಿ ಸುದೀಪ್ ಗೆ ಫೇವರಿಟ್ ಹಾಡಂತೆ. ಈ ಹಾಡನ್ನು ಕೇಳಲು ಅಭಿಮಾನಿಗಳು ಕಾದು ನಿಂತಿದ್ದಾರೆ.