Select Your Language

Notifications

webdunia
webdunia
webdunia
webdunia

ಶಿವಣ್ಣ ಅಭಿಮಾನಿಗಳಲ್ಲಿ ಭೈರಾಗಿ ಜೋಶ್

ಶಿವಣ್ಣ ಅಭಿಮಾನಿಗಳಲ್ಲಿ ಭೈರಾಗಿ ಜೋಶ್
ಬೆಂಗಳೂರು , ಶುಕ್ರವಾರ, 1 ಜುಲೈ 2022 (09:10 IST)
ಬೆಂಗಳೂರು: ಹಲವು ದಿನಗಳ ನಂತರ ಶಿವರಾಜ್ ಕುಮಾರ್ ಅಭಿನಯದ ಸಿನಿಮಾವೊಂದು ಬಿಡುಗಡೆಯಾಗುತ್ತಿರುವ ಖುಷಿ ಅಭಿಮಾನಿಗಳಲ್ಲಿ. ಇಂದಿನಿಂದ ಥಿಯೇಟರ್ ಗಳಲ್ಲಿ ಭೈರಾಗಿ ಹವಾ ಜೋರಾಗಲಿದೆ.

ಕಳೆದ ವರ್ಷ ಭಜರಂಗಿ 2 ಸಿನಿಮಾ ಬಳಿಕ ಶಿವರಾಜ್ ಕುಮಾರ್ ಅಭಿನಯದ ಸಿನಿಮಾ ಬಿಡುಗಡೆಯಾಗುತ್ತಿರುವುದು ಇದೇ ಮೊದಲು. ಬರೋಬ್ಬರಿ ಒಂಭತ್ತು ತಿಂಗಳ ಬಳಿಕ ಮೆಚ್ಚಿನ ನಟನನ್ನು ತೆರೆ ಮೇಲೆ ನೋಡುವ ಖುಷಿ ಅಭಿಮಾನಿಗಳಲ್ಲಿ ಜೋರಾಗಿದೆ.

ಈ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಜೊತೆ ಡಾಲಿ ಧನಂಜಯ್, ಪೃಥ್ವಿ ಅಂಬರ್ ಕೂಡಾ ಪ್ರಮುಖ ಪಾತ್ರದಲ್ಲಿದ್ದಾರೆ. ಭರ್ಜರಿ ಫೈಟ್ ಜೊತೆ ಮಸ್ತ್ ಡ್ಯಾನ್ಸ್ ಕೂಡಾ ಇದೆ. ಹೀಗಾಗಿ ಪಕ್ಕಾ ಎಂಟರ್ ಟೈನರ್ ಆಗಿರಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಿಯಾಲಿಟಿ ಶೋ ವೇದಿಕೆಯಲ್ಲಿ ಒಂದಾಗಲಿದ್ದಾರೆ ಕಿಚ್ಚ ಸುದೀಪ್-ಶಿವರಾಜ್ ಕುಮಾರ್