Select Your Language

Notifications

webdunia
webdunia
webdunia
webdunia

ರಿಯಾಲಿಟಿ ಶೋ ವೇದಿಕೆಯಲ್ಲಿ ಒಂದಾಗಲಿದ್ದಾರೆ ಕಿಚ್ಚ ಸುದೀಪ್-ಶಿವರಾಜ್ ಕುಮಾರ್

ರಿಯಾಲಿಟಿ ಶೋ ವೇದಿಕೆಯಲ್ಲಿ ಒಂದಾಗಲಿದ್ದಾರೆ ಕಿಚ್ಚ ಸುದೀಪ್-ಶಿವರಾಜ್ ಕುಮಾರ್
ಬೆಂಗಳೂರು , ಶುಕ್ರವಾರ, 1 ಜುಲೈ 2022 (09:00 IST)
ಬೆಂಗಳೂರು: ದಿ ವಿಲನ್ ಸಿನಿಮಾ ಬಳಿಕ ಕಿಚ್ಚ ಸುದೀಪ್-ಶಿವರಾಜ್ ಕುಮಾರ್ ನಡುವಿನ ಸ್ನೇಹ ಸಂಬಂಧ ಗಟ್ಟಿಯಾಗಿತ್ತು. ಕಿಚ್ಚನ ಎಲ್ಲಾ ಕಾರ್ಯಕ್ರಮಗಳಲ್ಲಿ ಶಿವಣ್ಣ, ಶಿವಣ್ಣನ ಎಲ್ಲಾ ಕಾರ್ಯಕ್ರಮಗಳಲ್ಲಿ ಕಿಚ್ಚ ಇದ್ದೇ ಇರುತ್ತಾರೆ.

ಇದೀಗ ಶಿವರಾಜ್ ಕುಮಾರ್ ತೀರ್ಪುಗಾರರಾಗಿರುವ ಜೀ ಕನ್ನಡ ವಾಹಿನಿಯ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಕಿಚ್ಚ ಸುದೀಪ್ ಭಾಗಿಯಾಗಲಿದ್ದಾರೆ.

ಸುದೀಪ್ ಈಗ ವಿಕ್ರಾಂತ್ ರೋಣ ಸಿನಿಮಾದ ಪ್ರಮೋಷನ್ ಮಾಡುತ್ತಿದ್ದಾರೆ. ಇದರ ಭಾಗವಾಗಿಯೇ ಸುದೀಪ್ ಡಿಕೆಡಿ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗಿಯಾಗಲಿದ್ದಾರೆ. ಈ ವೇಳೆ ಶಿವಣ್ಣ-ಸುದೀಪ್ ಜೊತೆಯಾಗಿ ಸ್ಟೆಪ್ಸ್ ಹಾಕುವುದನ್ನೂ ನೀವು ನೋಡಬಹುದು.  ಈ ಎಪಿಸೋಡ್ ನ ಶೂಟಿಂಗ್ ಈಗಾಗಲೇ ಮುಗಿದಿದ್ದು, ಈ ವಾರಂತ್ಯಕ್ಕೆ ಎಪಿಸೋಡ್ ಪ್ರಸಾರವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಡುಗಡೆಯಾದ 15 ದಿನಗಳೊಳಗೆ ಒಟಿಟಿಗೆ ಬಂದ ವಿರಾಟ ಪರ್ವಂ