Publish Date: Wed, 29 Jun 2022 (10:20 IST)
Updated Date: Wed, 29 Jun 2022 (10:36 IST)
ಹೈದರಾಬಾದ್: ಪವಿತ್ರಾ ಲೋಕೇಶ್-ನರೇಶ್ ಮದುವೆಯಾಗಿದ್ದಾರೆ ಎಂಬ ಸುದ್ದಿ ಭಾರೀ ವಿವಾದವಾಗಿತ್ತು. ಈ ಸಂಬಂಧ ಹಲವು ಮಾಧ್ಯಮಗಳಲ್ಲಿ ಅವಹೇಳನಕಾರಿ ಸುದ್ದಿಗಳು ಪ್ರಕಟವಾಗುತ್ತಿದೆ.
ತಮ್ಮ ಬಗ್ಗೆ ಸುಳ್ಳು ಸುದ್ದಿ ಹರಡಿಸುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪವಿತ್ರಾ ಲೋಕೇಶ್ ಸೈಬರ್ ಠಾಣೆ ಮೆಟ್ಟಿಲೇರಿದ್ದಾರೆ. ಸುಳ್ಳು ಸುದ್ದಿ ಹರಡಿಸುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ.
ತಮ್ಮದು ಏನೇ ಇದ್ದರೂ ಅದು ವೈಯಕ್ತಿಕ ವಿಚಾರ. ಅದು ಸಾರ್ವಜನಿಕವಾಗಿ ಗಾಸಿಪ್ ಗೆ ಆಹಾರವಾಗುತ್ತಿರುವುದು ಪವಿತ್ರಾ ಲೋಕೇಶ್ ಬೇಸರಕ್ಕೆ ಕಾರಣವಾಗಿದೆ. ಹೀಗಾಗಿ ಸುಳ್ಳು ಸುದ್ದಿ ಹರಡಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದೂರು ನೀಡಿದ್ದಾರೆ.