Publish Date: Tue, 28 Jun 2022 (09:30 IST)
Updated Date: Tue, 28 Jun 2022 (09:47 IST)
ಬೆಂಗಳೂರು: ಶಿವರಾಜ್ ಕುಮಾರ್ ತಮ್ಮನ್ನು ಪ್ರೀತಿಸುವವರಿಗೆ ಎಂದೂ ನಿರಾಸೆ ಮಾಡಲ್ಲ. ಎಷ್ಟಾದರೂ ದೊಡ್ಮನೆ ಮಗ. ಹೀಗಾಗಿ ಆ ಗುಣ ಅವರಲ್ಲಿ ಸಹಜವಾಗಿಯೇ ಇದೆ.
ಇದೀಗ ಜೀ ಕನ್ನಡದಲ್ಲಿ ಪ್ರಸಾರವಾಗುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ತಾವು ತೊಟ್ಟಿದ್ದ ಜಾಕೆಟ್ ನ್ನೇ ಆಂಕರ್ ಅನುಶ್ರೀಗೆ ಗಿಫ್ಟ್ ಆಗಿ ಕೊಟ್ಟಿದ್ದಾರೆ ಶಿವಣ್ಣ.
ಈ ಬಗ್ಗೆ ಅನುಶ್ರೀ ಹೇಳಿಕೊಂಡಿದ್ದು, ನಿಮ್ಮ ಜಾಕೆಟ್ ಚೆನ್ನಾಗಿದೆ ಅಣ್ಣ ಎಂದಷ್ಟೇ ಹೇಳಿದ್ದು, ಅಷ್ಟಕ್ಕೇ ಆಯ್ತು ಬಿಡಮ್ಮ ನಿಂಗೆ ಕೊಡ್ತೀನಿ ಎಂದ್ರು. ನಾನು ಸುಮ್ನೇ ಹೇಳಿದ್ದಾರೆ ಅಂದ್ಕೊಂಡೆ. ಆದರೆ ಎಷ್ಟಾದ್ರೂ ಅಣ್ಣಾವ್ರ ರಕ್ತ ಅಲ್ವಾ? ಆಕಾಶ ನೋಡದ ಕೈ ಪ್ರೀತಿ ಹಂಚಿದ ಕೈಗಳು. ಹೊರಡುವ ಮುನ್ನ ಜಾಕೆಟ್ ಬಿಚ್ಚಿ ಅದರ ಮೇಲೆ ವಿತ್ ಲಾಟ್ಸ್ ಆಫ್ ಲವ್ ಟು ಡಿಯರೆಸ್ಟ್ ಫ್ರೆಂಡ್ ಅನುಶ್ರೀ ಎಂದು ಬರೆದು ಸಹಿ ಹಾಕಿ ತಮ್ಮ ಕೈಯಾರೆ ಜಾಕೆಟ್ ತೊಡಿಸಿ ಮತ್ತೊಮ್ಮೆ ಮಮತೆ ಮೆರೆದ ಪ್ರೀತಿಯ ಮುತ್ತಣ್ಣ. ಥ್ಯಾಂಕ್ಯೂ ಶಿವಣ್ಣ ನಿಮ್ಮ ರೂಪದಲ್ಲಿ ನಾವು ನಮ್ಮ ಪರಮಾತ್ಮನನ್ನು ನೋಡುತ್ತಿದ್ದೇವೆ ಎಂದಿದ್ದಾರೆ.