ಬೆಂಗಳೂರು: ಅಣ್ಣಾವ್ರು, ವರನಟ ಡಾ. ರಾಜ್ ಕುಮಾರ್ ಅಭಿನಯದ ಅವಿಸ್ಮರಣೀಯ ಸಿನಿಮಾಗಳಲ್ಲಿ ಭಾಗ್ಯವಂತರು ಸಿನಿಮಾ ಕೂಡಾ ಒಂದು. ಈ ಸಿನಿಮಾ ಈಗ ಥಿಯೇಟರ್ ನಲ್ಲಿ ಮರು ಬಿಡುಗಡೆಯಾಗಲಿದೆ.
ಡಾ.ರಾಜ್ ಕುಮಾರ್-ಸರೋಜಾದೇವಿ ಪ್ರಮುಖ ಪಾತ್ರದಲ್ಲಿರುವ ಭಾಗ್ಯವಂತರು ಸಿನಿಮಾ ಬಿಡುಗಡೆಯಾಗಿ ಬರೋಬ್ಬರಿ 48 ವರ್ಷಗಳಾಗಿವೆ.
ಈ ಹಿನ್ನಲೆಯಲ್ಲಿ ಅವರ ಅಪ್ಪಟ ಅಭಿಮಾನಿ ಮುನಿರಾಜು ಎಂ. ಎಂಬವರು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಹೊಸ ರೂಪದಲ್ಲಿ ಸಿನಿಮಾವನ್ನು ಥಿಯೇಟರ್ ನಲ್ಲಿ ಬಿಡುಗಡೆ ಮಾಡಲಿದ್ದಾರೆ.