ಮುಂಬೈ: ಒಂದೆಡೆ ಕೆಎಲ್ ರಾಹುಲ್ ಅಲಭ್ಯತೆ. ಇನ್ನೊಂದೆಡೆ ನಾಯಕ ರೋಹಿತ್ ಶರ್ಮಾಗೆ ಕೊರೋನಾ. ಇದರಿಂದಾಗಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾಗೆ ಆರಂಭಿಕರ ಕೊರತೆ ಎದ್ದು ಕಾಣುತ್ತಿದೆ.
									
			
			 
 			
 
 			
			                     
							
							
			        							
								
																	ಈ ಹಿನ್ನಲೆಯಲ್ಲಿ ಮಯಾಂಕ ಅಗರ್ವಾಲ್ ಗೆ ಕರೆ ನೀಡಲಾಗಿದೆ. ಮಯಾಂಕ್ ತಕ್ಷಣವೇ ಇಂಗ್ಲೆಂಡ್ ಗೆ ಪ್ರಯಾಣ ಬೆಳೆಸಲಿದ್ದಾರೆ.
									
										
								
																	ಈಗಿನ ನಿಯಮದ ಪ್ರಕಾರ ವಿದೇಶದಿಂದ ಬಂದ  ಆಟಗಾರರು ಕ್ವಾರಂಟೈನ್ ಗೊಳಗಾಗಬೇಕಾಗಿಲ್ಲ. ಹೀಗಾಗಿ ಜುಲೈ 1 ರಿಂದ ಆರಂಭವಾಗುವ ಟೆಸ್ಟ್ ಗೆ ಒಂದು ವೇಳೆ ರೋಹಿತ್ ಅಲಭ್ಯರಾದರೆ ಮಯಾಂಕ್ ಆರಂಭಿಕರಾಗಿ ತಂಡದಲ್ಲಿ ಅವಕಾಶ ಪಡೆಯಲಿದ್ದಾರೆ.