Select Your Language

Notifications

webdunia
webdunia
webdunia
webdunia

ಹುಟ್ಟುಹಬ್ಬಕ್ಕೆ ಮನೆ ಹತ್ರ ಬರ್ಬೇಡಿ ಎಂದ ಗೋಲ್ಡನ್ ಸ್ಟಾರ್ ಗಣೇಶ್

ಹುಟ್ಟುಹಬ್ಬಕ್ಕೆ ಮನೆ ಹತ್ರ ಬರ್ಬೇಡಿ ಎಂದ ಗೋಲ್ಡನ್ ಸ್ಟಾರ್ ಗಣೇಶ್
ಬೆಂಗಳೂರು , ಮಂಗಳವಾರ, 28 ಜೂನ್ 2022 (09:10 IST)
ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಜುಲೈ 2 ರಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಾರೆ. ಆದರೆ ಈ ಬಾರಿಯೂ ಅವರು ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡುತ್ತಿದ್ದಾರೆ.

ಗಣೇಶ್ ಕಳೆದ ಎರಡು ವರ್ಷಗಳಿಂದ ಕೊರೋನಾ ಕಾರಣದಿಂದ ಅಭಿಮಾನಿಗಳ ಸಮ್ಮುಖದಲ್ಲಿ ಹುಟ್ಟುಹಬ್ಬ ಆಚರಿಸಿಲ್ಲ. ಈ ಬಾರಿಯೂ ಅಭಿಮಾನಿಗಳಿಗೆ ಬರ್ತ್ ಡೇ ದಿನ ಮನೆಗೆ ಬರಬೇಡಿ ಎಂದಿದ್ದಾರೆ ಗಣೇಶ್.

‘ನನ್ನ ಹುಟ್ಟುಹಬ್ಬವನ್ನು ನಿಮ್ಮ ಹುಟ್ಟುಹಬ್ಬದಂತೆ ಆಚರಿಸುವ ನಿಮ್ಮ ಅಭಿಮಾನಕ್ಕೆ ಚಿರ ಋಣಿ. ಹುಟ್ಟುಹಬ್ಬದ ನೆಪದಲ್ಲಾದರೂ ನಿಮ್ಮೆಲ್ಲರನ್ನು ಭೇಟಿ ಮಾಡಿ ಸಂಭ್ರಮಿಸುವ ಹಂಬಲ ನನಗೂ ಇದೆ. ಆದರೆ ಕಳೆದ ಬಾರಿಯಂತೆ ಈ ಬಾರಿಯೂ ಹುಟ್ಟುಹಬ್ಬದ ದಿನ ಕಾರಣಾಂತರಗಳಿಂದ ನಾನು ಮನೆಯಲ್ಲಿರಲ್ಲ. ಹೀಗಾಗಿ ಯಾರೂ ದಯವಿಟ್ಟು ಮನೆ ಹತ್ರ ಬರಬೇಡಿ. ನನಗಾಗಿ ತರುವ ಕೇಕ್, ಹಾರ, ತುರಾಯಿ ಖರ್ಚನ್ನು ಅಗತ್ಯವಿರುವವರಿಗೆ ನಿಮ್ಮ ಕೈಲಾದಷ್ಟು ನೆರವು ನೀಡಿ’ ಎಂದು ಗಣೇಶ್ ಮನವಿ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹನಿಮೂನ್ ಮುಗಿದ ತಕ್ಷಣವೇ ಡ್ಯೂಟಿಗೆ ಹಾಜರಾದ ನಯನತಾರಾ