Publish Date: Tue, 28 Jun 2022 (08:50 IST)
Updated Date: Tue, 28 Jun 2022 (09:08 IST)
ಹೈದರಾಬಾದ್: ಟಾಲಿವುಡ್ ನಟಿ ನಯನತಾರಾ ಇತ್ತೀಚೆಗಷ್ಟೇ ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ಮದುವೆಯಾಗಿ ಥೈಲ್ಯಾಂಡ್ ನಲ್ಲಿ ಹನಿಮೂನ್ ಗೆ ತೆರಳಿದ್ದರು.
ಇದೀಗ ಹನಿಮೂನ್ ಮುಗಿಸಿಕೊಂಡು ಬಂದಿರುವ ನಯನತಾರಾ ತಕ್ಷಣವೇ ತಮ್ಮ ವೃತ್ತಿ ಜೀವನದ ಬಗ್ಗೆ ಗಮನಕೇಂದ್ರೀಕರಿಸಿದ್ದಾರೆ.
ನಯನತಾರಾ ಬಾಲಿವುಡ್ ನಟ ಶಾರುಖ್ ಖಾನ್ ನಾಯಕರಾಗಿರುವ ಜವಾನ್ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಇದೀಗ ಹನಿಮೂನ್ ಮುಗಿಸಿಕೊಂಡು ಬಂದ ತಕ್ಷಣವೇ ನಯನತಾರಾ ಶೂಟಿಂಗ್ ಗೆ ಹಾಜರಾಗಿದ್ದಾರಂತೆ. ಅವರ ವೃತ್ತಿಪರತೆಗೆ ಚಿತ್ರತಂಡ ಮೆಚ್ಚುಗೆ ವ್ಯಕ್ತಪಡಿಸಿದೆ.