ಹೈದರಾಬಾದ್: ಪುಷ್ಪ 1 ನೇ ಭಾಗದ ನಂತರ ನಟ ಅಲ್ಲು ಅರ್ಜುನ್ ಇನ್ನೇನು ಎರಡನೇ ಭಾಗದ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳುತ್ತಾರೆ ಎಂಬುದೇ ಎಲ್ಲರ ಲೆಕ್ಕಾಚಾರವಾಗಿತ್ತು.
ಆದರೆ ಪುಷ್ಪ 2 ಸ್ಕ್ರಿಪ್ಟ್ ನಲ್ಲಿ ಬದಲಾವಣೆ ಮಾಡಲಾಗುತ್ತಿರುವುದರಿಂದ ಚಿತ್ರೀಕರಣ ವಿಳಂಬವಾಗುತ್ತಿದೆ. ಆದರೆ ಈ ನಡುವೆ ಯಾವುದೇ ಸಿನಿಮಾ ಮಾಡದೇ ಅಲ್ಲು ಅರ್ಜುನ್ ಗೂ ಸಮಯ ಪೋಲಾಗುತ್ತಿದೆ ಎನಿಸಿರಬೇಕು.
ಈ ಕಾರಣಕ್ಕೆ ಸ್ಟೈಲಿಶ್ ತಾರೆ ಪುಷ್ಪ 2 ಗೆ ಮೊದಲು ಇನ್ನೊಂದು ಸಿನಿಮಾ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ರೆಡಿಯಾಗಿದ್ದಾರಂತೆ. ನಿರ್ದೇಶಕ ಬಿ. ಶ್ರೀನಿವಾಸ್ ಜೊತೆ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿಯಿದೆ. ಇದರ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಬಂದಿಲ್ಲ.