Publish Date: Sat, 25 Jun 2022 (09:28 IST)
Updated Date: Sat, 25 Jun 2022 (09:29 IST)
ಹೈದರಾಬಾದ್: ನಟ ಬಾಲಕೃಷ್ಣಗೆ ಕೊರೋನಾ ಪಾಸಿಟಿವ್ ಆಗಿದ್ದು ಹೋಂ ಐಸೋಲೇಷನ್ ಗೊಳಗಾಗಿದ್ದಾರೆ. ಆದರೆ ಅಭಿಮಾನಿಗಳಿಗೆ ಮಾತ್ರ ಶ್ರುತಿ ಹಾಸನ್ ಬಗ್ಗೆ ಚಿಂತೆಯಾಗಿದೆ.
ಇದಕ್ಕೆ ಕಾರಣ ಬಾಲಕೃಷ್ಣ ಕೆಲವೇ ದಿನಗಳ ಮೊದಲು ಶ್ರುತಿ ಹಾಸನ್ ಜೊತೆ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದರು. ಎನ್ ಬಿಕೆ 107 ಸಿನಿಮಾ ಶೂಟಿಂಗ್ ನಲ್ಲಿ ಪಾಲ್ಗೊಂಡ ಕೆಲವೇ ದಿನದಲ್ಲಿ ಬಾಲಕೃಷ್ಣಗೆ ಕೊರೋನಾ ಸೋಂಕು ಕಾಣಿಸಿಕೊಂಡಿರುವುದು ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.
ಹೀಗಾಗಿ ಶ್ರುತಿ ಹಾಸನ್ ಗೂ ಕೊರೋನಾ ಸೋಂಕು ತಗುಲಿರಬಹುದೇ ಎಂಬುದು ಅಭಿಮಾನಿಗಳ ಆತಂಕ. ಸದ್ಯಕ್ಕೆ ಬಾಲಕೃಷ್ಣಗೆ ಯಾವುದೇ ಲಕ್ಷಣಗಳಿಲ್ಲ. ಆದರೆ ತಮ್ಮ ಸಂಪರ್ಕಕ್ಕೆ ಬಂದಿರುವವರಿಗೆಲ್ಲಾ ಪರೀಕ್ಷಿಸಿಕೊಳ್ಳಲು ಮನವಿ ಮಾಡಿದ್ದಾರೆ.