Select Your Language

Notifications

webdunia
webdunia
webdunia
webdunia

ಹೊಸ ಫೀಲ್ಡ್ ಗೆ ಎಂಟ್ರಿ ಕೊಟ್ಟಿರುವ ರೌಡಿ ಬೇಬಿ ಅಮೂಲ್ಯ

ಹೊಸ ಫೀಲ್ಡ್ ಗೆ ಎಂಟ್ರಿ ಕೊಟ್ಟಿರುವ ರೌಡಿ ಬೇಬಿ ಅಮೂಲ್ಯ
ಬೆಂಗಳೂರು , ಶನಿವಾರ, 25 ಜೂನ್ 2022 (08:30 IST)
ಬೆಂಗಳೂರು: ಕಿರುತೆರೆಯ ರೌಡಿ ಬೇಬಿ ಎಂದೇ ಖ್ಯಾತರಾಗಿರುವ ಅಮೂಲ್ಯ ಅಲಿಯಾಸ್ ನಟಿ ನಿಶಾ ರವಿಕೃಷ್ಣನ್ ಈಗ ಯೂ ಟ್ಯೂಬ್ ಲೋಕಕ್ಕೆ ಕಾಲಿಟ್ಟಿದ್ದಾರೆ.

ಇತ್ತೀಚೆಗಿನ ದಿನಗಳಲ್ಲಿ ಕಿರುತೆರೆ ನಟಿಯರು ತಮ್ಮದೇ ಯೂ ಟ್ಯೂಬ್ ಚಾನೆಲ್ ಮೂಲಕ ಬ್ಯೂಟಿ ಟಿಪ್ಸ್, ಹೆಲ್ತ್ ಅಥವಾ ಅಡುಗೆ ರೆಸಿಪಿಗಳ ವಿಡಿಯೋ ಮಾಡುವುದು ಕಾಮನ್ ಆಗಿದೆ. ಇದಕ್ಕೆ ನಟಿ ಮೇಘಾ ಶೆಟ್ಟಿ, ಅಮೃತಾ ರಾಮಮೂರ್ತಿ, ವೈಷ್ಣವಿ ಗೌಡ ಮುಂತಾದವರು ಉದಾಹರಣೆ.ಈ ನಟಿಯರು ಯೂ ಟ್ಯೂಬ್ ಮೂಲಕ ಕ್ಲಿಕ್ ಆಗಿದ್ದಾರೆ.

ಈ ಸಾಲಿಗೆ ಈಗ ನಿಶಾ ಕೂಡಾ ಸೇರ್ಪಡೆಯಾಗಿದ್ದಾರೆ. ಇತ್ತೀಚೆಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ನಿಶಾ ಈ ವೇಳೆ ಯೂ ಟ್ಯೂಬ್ ಚಾನೆಲ್ ಆರಂಭಿಸುತ್ತಿರುವುದಾಗಿ ಮಾಹಿತಿ ನೀಡಿದ್ದರು. ಇದೀಗ ತಮ್ಮ ತಾಯಿಯೊಂದಿಗೆ ಅಡುಗೆ ಮಾಡುವ ವಿಡಿಯೋ ಪ್ರಕಟಿಸುವ ಮೂಲಕ ಹೊಸ ವೇದಿಕೆಗೆ ಎಂಟ್ರಿ ಕೊಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿನಿಮಾ ತಂಡಕ್ಕೆ ಗುಡ್ ಬೈ ಹೇಳಿದ ರಶ್ಮಿಕಾ ಮಂದಣ್ಣ!