ಬೆಂಗಳೂರು: ಆಂಕರ್ ಅನುಶ್ರೀ ಸ್ವಂತ ಪರಿಶ್ರಮದಿಂದ ಮೇಲೆ ಬಂದು ಇಂದು ಕನ್ನಡದ ನಂ.1 ಆಂಕರ್ ಆಗಿ ಬೆಳೆದಿದ್ದಾರೆ. ಇದೀಗ ತಮ್ಮ ವೈಯಕ್ತಿಕ ಜೀವನದಲ್ಲಿ ಬಹುದಿನಗಳ ಕನಸು ನನಸು ಮಾಡಿಕೊಳ್ಳಲು ಹೊರಟಿದ್ದಾರೆ.
ಬೆಂಗಳೂರಿನಲ್ಲಿ ಸ್ವಂತ ಮನೆ ಕಟ್ಟುವ ಅನುಶ್ರೀ ಕನಸು ನನಸಾಗುತ್ತಿದೆ. ಜಯನಗರದಲ್ಲಿ ಸೈಟ್ ಒಂದನ್ನು ಖರೀದಿಸಿದ್ದ ಅನುಶ್ರೀ ಈಗ ಅಲ್ಲಿ ಮನೆ ಕಟ್ಟಲು ಭೂಮಿ ಪೂಜೆ ನೆರವೇರಿಸಿದ್ದಾರೆ.
ಸ್ವಂತ ದುಡಿಮೆಯಲ್ಲಿ ತನ್ನ ಸಹೋದರ, ತಾಯಿಯನ್ನು ನೋಡಿಕೊಳ್ಳುತ್ತಿರುವ ಅನುಶ್ರೀ ಇತ್ತೀಚೆಗೆ ತಂದೆಯ ವಿಚಾರಕ್ಕಾಗಿ ಸುದ್ದಿಯಲ್ಲಿದ್ದರು. ಆದರೆ ಈಗ ವೈಯಕ್ತಿಕ ಜೀವನದಲ್ಲಿ ಖುಷಿಪಡುವ ಸುದ್ದಿ ನೀಡಿದ್ದಾರೆ.
ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!