ಬೆಂಗಳೂರು: ಗೋವಾದಲ್ಲಿ ಜಂಪಿಂಗ್ ಮಾಡಲು ಹೋಗಿ ಕುತ್ತಿಗೆಗೆ ಪೆಟ್ಟು ಮಾಡಿಕೊಂಡಿದ್ದ ನಟ ದಿಗಂತ್ ಮಂಚಾಲೆ ಶಸ್ತ್ರಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ದಿಗಂತ್ ಗೆ ಕುತ್ತಿಗೆಗೆ ಆಪರೇಷನ್ ನಡೆದಿತ್ತು. ಇದಾದ ಬಳಿಕ ನಿನ್ನೆ ಅವರು ಡಿಸ್ಚಾರ್ಜ್ ಆಗಿದ್ದು, ಇಂದು ಪತ್ನಿ, ನಟಿ ಐಂದ್ರಿತಾ ಟ್ವೀಟ್ ಮೂಲಕ ದಿಗಂತ್ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ.
ದಿಗಂತ್ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆದಿದ್ದು, ಈಗ ಚೇತರಿಕೆಯ ಹಾದಿಯಲ್ಲಿದ್ದಾರೆ. ಹಾರೈಸಿದ ಎಲ್ಲಾ ಅಭಿಮಾನಿಗಳಿಗೆ, ಸ್ನೇಹಿತರಿಗೆ, ಚಿತ್ರರಂಗದ ಸ್ನೇಹಿತರಿಗೆ, ಮಾಧ‍್ಯಮಗಳಿಗೆ ಧನ್ಯವಾದಗಳು ಎಂದು ಐಂದ್ರಿತಾ ದಿಗಂತ್ ಲೇಟೆಸ್ಟ್ ಫೋಟೋ ಮೂಲಕ ಸಂದೇಶ ಬರೆದಿದ್ದಾರೆ.