Select Your Language

Notifications

webdunia
webdunia
webdunia
webdunia

ಮತ್ತೊಂದು ವಿನೂತನ ಸಿನಿಮಾ ಒಪ್ಪಿಕೊಂಡ ಪ್ರಿಯಾಂಕ ಉಪೇಂದ್ರ

ಮತ್ತೊಂದು ವಿನೂತನ ಸಿನಿಮಾ ಒಪ್ಪಿಕೊಂಡ ಪ್ರಿಯಾಂಕ ಉಪೇಂದ್ರ
ಬೆಂಗಳೂರು , ಶುಕ್ರವಾರ, 24 ಜೂನ್ 2022 (08:40 IST)
ಬೆಂಗಳೂರು: ನಟಿ ಪ್ರಿಯಾಂಕ ಉಪೇಂದ್ರ ಮದುವೆ ಬಳಿಕ ಲವ್ವರ್ ಪಾತ್ರಗಳಿಂದ ಹೊರಬಂದು ವಿಭಿನ್ನ ಪಾತ್ರಗಳ ಮೂಲಕ ಗಮನಸೆಳೆಯುತ್ತಿದ್ದಾರೆ.

ಇದೀಗ ಪ್ರಿಯಾಂಕ ಅಂತಹದ್ದೇ ವಿನೂತನ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರೆ. ಈಗಾಗಲೇ 1980 ಎಂಬ ಸಿನಿಮಾ ಮಾಡುತ್ತಿರುವ ಪ್ರಿಯಾಂಕ ಅದೇ ತಂಡದೊಂದಿಗೆ ‘ಕರ್ತ, ಕರ್ಮ, ಕ್ರಿಯ’ ಎಂಬ ಟೈಟಲ್ ನ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ.

ಈ ಸಿನಿಮಾದ ಪೋಸ್ಟರ್ ಬಿಡುಗಡೆಯಾಗಿದ್ದು ರಕ್ತ ಸಿಕ್ತ ಮುಖ ಹೊಂದಿರುವ ಪ್ರಿಯಾಂಕ ಅವರ ಫೋಟೋವಿದೆ. ಇದನ್ನು ನೋಡಿದರೆ ಇದೂ ಒಂದು ಕ್ರೈಂ ಥ್ರಿಲ್ಲರ್ ಎನ್ನುವುದು ಸ್ಪಷ್ಟವಾಗುತ್ತದೆ. ಇದೂ ಮತ್ತೊಂದು ಮಹಿಳಾ ಪ್ರಧಾನ ಸಿನಿಮಾ ಎನ್ನುವುದು ಪಕ್ಕಾ ಆಗುತ್ತದೆ. ರಾಜ್ ಕಿರಣ್ ಈ ಸಿನಿಮಾದ ನಿರ್ದೇಶನದ ಜವಾಬ್ಧಾರಿ ಹೊತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಂಭಾವನೆ ಏರಿಕೆ ಮಾಡಿದ ಪ್ರಭಾಸ್: ನಿರ್ಮಾಪಕರು ಕಂಗಾಲು