ಹೈದರಾಬಾದ್: ಸಾಲು ಸಾಲು ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಮಾಡುತ್ತಿರುವ ಪ್ರಭಾಸ್ ಈಗ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಆದಿಪುರುಷ್ ಗೆ ಸಂಭಾವನೆ ಏರಿಕೆ ಮಾಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಆದಿಪುರುಷ್ ಎಂಬ ಐತಿಹಾಸಿಕ ಸಿನಿಮಾದಲ್ಲಿ ರಾಮನ ಪಾತ್ರದಲ್ಲಿ ಮಿಂಚಲಿರುವ ಪ್ರಭಾಸ್ ಈ ಸಿನಿಮಾಗಾಗಿ ಶೇ.20 ರಷ್ಟು ಸಂಭಾವನೆ ಏರಿಕೆ ಮಾಡಿದ್ದಾರಂತೆ. ಪ್ರಭಾಸ್ ಸಂಭಾವನೆ ಕೇಳಿ ನಿರ್ಮಾಪಕರು ಕಂಗಾಲಾಗಿದ್ದಾರೆ ಎಂದು ಲೇಟೆಸ್ಟ್ ಆಗಿ ಹರಿದಾಡುತ್ತಿರುವ ಸುದ್ದಿ.
ಆದಿಪುರುಷ್ ಸಿನಿಮಾಗೆ ಬರೋಬ್ಬರಿ 100 ಕೋಟಿ ರೂ. ಸಂಭಾವನೆಗೆ ಬೇಡಿಕೆಯಿಟ್ಟಿದ್ದಾರಂತೆ ಪ್ರಭಾಸ್. ಈ ಹೊಸ ಬೇಡಿಕೆಯಿಂದಾಗಿ ಸಿನಿಮಾ ಅರ್ಧಕ್ಕೇ ನಿಲ್ಲಿಸಲೂ ಆಗದೇ ಚಿತ್ರತಂಡ ಈಗ ದುಬಾರಿ ಸಂಭಾವನೆ ನೀಡದೇ ಬೇರೆ ವಿಧಿಯಿಲ್ಲ ಎಂಬ ಸ್ಥಿತಿಯಲ್ಲಿದೆಯಂತೆ.