ಮುಂಬೈ: ನಟಿ ರಶ್ಮಿಕಾ ತಮ್ಮ ಸೋಷಿಯಲ್ ಮೀಡಿಯಾ ಪುಟದಲ್ಲಿ ಗುಡ್ ಬೈ ಹೇಳಿದ್ದಾರೆ! ಆದರೆ ಸಿನಿಮಾ ತಂಡದೊಂದಿಗಿನ ಚಿತ್ರ ಪ್ರಕಟಿಸಿ ಗುಡ್ ಬೈ ಹೇಳಿದ್ದಾರೆ!
									
			
			 
 			
 
 			
			                     
							
							
			        							
								
																	ಆದರೆ ಅವರು ಗುಡ್ ಬೈ ಹೇಳಿರುವುದು ಗುಡ್ ಬೈ ಸಿನಿಮಾ ತಂಡಕ್ಕೆ. ಅಮಿತಾಭ್ ಬಚ್ಚನ್ ಜೊತೆ ರಶ್ಮಿಕಾ ನಟಿಸುತ್ತಿರುವ ಗುಡ್ ಬೈ ಸಿನಿಮಾದ ಶೂಟಿಂಗ್ ಮುಕ್ತಾಯವಾಗಿದೆ. ಹೀಗಾಗಿ ಈ ಸಿನಿಮಾ ತಂಡಕ್ಕೆ ರಶ್ಮಿಕಾ ಗುಡ್ ಬೈ ಎಂದು ಅನುಭವ ಹಂಚಿಕೊಂಡಿದ್ದಾರೆ.
									
										
								
																	ಸಿನಿಮಾದಲ್ಲಿ ಅಭಿನಯಿಸಿದ ಕ್ಷಣ ಅಮೋಘ. ಅಮಿತಾಭ್ ಸರ್ ನೀವು ಅತ್ಯಂತ ಬೆಸ್ಟ್ ವ್ಯಕ್ತಿ. ನೀನಾ ಗುಪ್ತಾ ನೀವು ಎಷ್ಟು ಒಳ್ಳೆಯವರು ಎಂದು ಹೇಳಕ್ಕೂ ಆಗಲ್ಲ.  ಈ ಎರಡು ವರ್ಷಗಳ ಚಿತ್ರೀಕರಣದ ಪಯಣ ಅವಿಸ್ಮರಣೀಯ. ಮನಸ್ಪೂರ್ತಿಯಾಗಿ ನಗಲು ರೆಡಿಯಾಗಿ ಎಂದು ರಶ್ಮಿಕಾ ಸುದೀರ್ಘ ಪೋಸ್ಟ್ ಮೂಲಕ ಚಿತ್ರದ ಅನುಭವ ಹಂಚಿಕೊಂಡಿದ್ದಾರೆ.