ಬೆಂಗಳೂರು: ಕಿರುತೆರೆಯ ಖ್ಯಾತ ಜೋಡಿ ಚಂದನ್ ಕುಮಾರ್ ಮತ್ತು ಕವಿತಾ ಗೌಡ ದಂಪತಿ ಹೊಸ ಮನೆ ಪ್ರವೇಶಿಸಿದ ಖುಷಿಯಲ್ಲಿದ್ದಾರೆ.
ಚಂದನ್ ಹಾಗೂ ಕವಿತಾ ಹೊಸ ಮನೆಯ ಗೃಹಪ್ರವೇಶ ನೆರವೇರಿದೆ. ಕವಿತಾ ಬಲಗಾಲಿಟ್ಟು ಶಾಸ್ತ್ರೋಸ್ತ್ರವಾಗಿ ಹೊಸ ಮನೆಗೆ ಪ್ರವೇಶ ಮಾಡಿದ್ದಾರೆ.
ಚಂದನ್ ಮತ್ತು ಕವಿತಾ ಲಕ್ಷ್ಮೀ ಬಾರಮ್ಮಾ ಧಾರವಾಹಿಯಲ್ಲಿ ಜೊತೆಯಾಗಿ ನಟಿಸಿದ್ದ ವೇಳೆ ಸ್ನೇಹಿತರಾಗಿದ್ದರು. ಅದಾದ ಬಳಿಕ ಬಹುಕಾಲ ಪರಸ್ಪರ ಪ್ರೇಮಿಗಳಾಗಿ ಒಂದು ವರ್ಷದ ಹಿಂದಷ್ಟೇ ವಿವಾಹವಾಗಿದ್ದರು. ಇದೀಗ ಹೊಸ ಮನೆಗೆ ಗೃಹಪ್ರವೇಶ ಮಾಡಿದ ಖುಷಿಯಲ್ಲಿದ್ದಾರೆ.