Publish Date: Tue, 07 Jun 2022 (09:10 IST)
Updated Date: Tue, 07 Jun 2022 (09:11 IST)
ಬೆಂಗಳೂರು: ಕನ್ನಡದ ಜನಪ್ರಿಯ ವಾಹಿನಿಗಳಾದ ಜೀ ಕನ್ನಡ ಮತ್ತು ಕಲರ್ಸ್ ಕನ್ನಡ ಎರಡೂ ವಾಹಿನಿಗಳು ಒಂದೇ ಬಾರಿಗೆ ಎರಡು ಒಂದೇ ರೀತಿಯ ಶೋ ಪ್ರಸಾರ ಮಾಡಲು ಮುಂದಾಗಿದೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಈ ಮೊದಲು ಸೃಜನ್ ಲೋಕೇಶ್ ನೇತೃತ್ವದಲ್ಲಿ ರಾಜ-ರಾಣಿ ಸೀಸನ್ 1 ರಿಯಾಲಿಟಿ ಶೋ ನಡೆದಿತ್ತು. ರಿಯಲ್ ಜೋಡಿಗಳ ಈ ಕಾರ್ಯಕ್ರಮ ಯಶಸ್ವಿಯಾದ ಹಿನ್ನಲೆಯಲ್ಲಿ ಅದೇ ಟೀಂ ಈಗ ಎರಡನೇ ಸೀಸನ್ ಶುರು ಮಾಡುತ್ತಿದೆ. ಇದು ಈ ವಾರಂತ್ಯದಿಂದ ಅಂದರೆ ಶನಿವಾರ ಮತ್ತು ಭಾನುವಾರ ರಾತ್ರಿ 7.30 ಕ್ಕೆ ಆರಂಭವಾಗಲಿದೆ.
ಇನ್ನೊಂದೆಡೆ ಜೀ ಕನ್ನಡ ವಾಹಿನಿ ಕೂಡಾ ಇಂತಹದ್ದೇ ಶೋ ಆರಂಭಿಸಲು ಮುಂದಾಗಿದೆ. ಇದುವರೆಗೆ ಡಿಕೆಡಿ, ಸರಿಗಮಪ, ಡ್ರಾಮಾ ಜ್ಯೂನಿಯರ್ಸ್ ಮುಂತಾದ ಶೋಗಳನ್ನೇ ಮಾಡಿ ಸಕ್ಸಸ್ ಕಂಡಿದ್ದ ಜೀ ವಾಹಿನಿ ಈಗ ಮೊದಲ ಬಾರಿಗೆ ಜೋಡಿಗಳ ರಿಯಾಲಿಟಿ ಶೋ ಮಾಡಲು ಹೊರಟಿದೆ. ಆಂಕರ್ ಅನುಶ್ರೀ ಮತ್ತು ಅರ್ಜುನ್ ಜನ್ಯಾ ಇರುವ ಪ್ರೋಮೋ ಈಗಾಗಲೇ ಬಿಡುಗಡೆಯಾಗಿದೆ. ಇದಕ್ಕೆ ಜೋಡಿ ನಂ.1 ಎಂದು ಹೆಸರಿಡಲಾಗಿದೆ. ಈ ಕಾರ್ಯಕ್ರಮವೂ ಜೂನ್ 11 ರಿಂದ ಸಂಜೆ 6.30 ಕ್ಕೆ ಆರಂಭವಾಗಲಿದೆ. ಇವೆರಡರ ಪೈಕಿ ಯಾವುದು ಯಶಸ್ಸು ಪಡೆಯುತ್ತದೆಯೋ ಕಾದು ನೋಡಬೇಕು.