Publish Date: Mon, 20 Jun 2022 (16:46 IST)
Updated Date: Mon, 20 Jun 2022 (16:48 IST)
ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ದೊರೆಸಾನಿ ಧಾರವಾಹಿಯ ನಾಯಕ ಆನಂದ್ ಅಲಿಯಾಸ್ ನಟ ಪೃಥ್ವಿರಾಜ್ ಈಗ ನಿಜ ಜೀವನದಲ್ಲೂ ತಾನು ಹೀರೋ ಎಂದು ನಿರೂಪಿಸಿದ್ದಾರೆ.
ಧಾರವಾಹಿ ಮೂಲಕ ಹೆಂಗಳೆಯರ ಮನಗೆದ್ದಿರುವ ನಟ ಪೃಥ್ವಿರಾಜ್ ಈಗ ಬಡಮಕ್ಕಳಿಗೆ ಇತ್ತೀಚೆಗೆ ಬಿಡುಗಡೆಯಾಗಿರುವ 777 ಚಾರ್ಲಿ ಸಿನಿಮಾ ತೋರಿಸಿ ಖುಷಿಪಟ್ಟಿದ್ದಾರೆ. ಮಕ್ಕಳನ್ನು ಥಿಯೇಟರ್ ಗೆ ಕರೆದೊಯ್ದು, ತಿಂಡಿ ಕೊಡಿಸಿ ಅವರ ಜೊತೆ ಕೂತು ಸಿನಿಮಾ ವೀಕ್ಷಿಸಿ ಖುಷಿಕೊಟ್ಟಿದ್ದಾರೆ.
ಹೆಚ್ಚಿನ ಮಕ್ಕಳು ಇದೇ ಮೊದಲ ಬಾರಿಗೆ ಥಿಯೇಟರ್ ನಲ್ಲಿ ಸಿನಿಮಾ ನೋಡುತ್ತಿದ್ದಾರೆ. ಅಪ್ಪಂದಿರ ದಿನಕ್ಕೆ ಈ ಮಕ್ಕಳ ಮೊಗದಲ್ಲಿ ನಗು ಮೂಡಿಸಿದ್ದು ವಿಶೇಷ ಗಳಿಗೆ ಎಂದು ಪೃಥ್ವಿರಾಜ್ ಹೇಳಿದ್ದಾರೆ.