Publish Date: Sun, 26 Jun 2022 (17:09 IST)
Updated Date: Sun, 26 Jun 2022 (17:11 IST)
ಬೆಂಗಳೂರು: ಕಿಚ್ಚ ಸುದೀಪ್ ಗೆ ಇತ್ತೀಚೆಗೆ ರಾಜಸ್ಥಾನ್ ರಾಯಲ್ಸ್ ತಂಡದ ಸ್ಟಾರ್ ಆಟಗಾರ ಜೋಸ್ ಬಟ್ಲರ್ ಬ್ಯಾಟ್ ಉಡುಗೊರೆಯಾಗಿ ನೀಡಿದ್ದು ಸುದ್ದಿಯಾಗಿತ್ತು.
ಸುದೀಪ್ ಗೆ ಈಗ ಮತ್ತೊಬ್ಬ ಕ್ರಿಕೆಟ್ ದಿಗ್ಗಜ ಕ್ರಿಕೆಟಿಗರ ಸಹಿಯುಳ್ಳ ಅಪರೂಪದ ಬ್ಯಾಟ್ ನ್ನು ಉಡುಗೊರೆಯಾಗಿ ನೀಡಿದ್ದಾರೆ.
1983 ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್, ಕಿಚ್ಚ ಸುದೀಪ್ ಗೆ ತಮ್ಮ ತಂಡದಲ್ಲಿದ್ದ ಆಟಗಾರರ ಹಸ್ತಾಕ್ಷರವಿರುವ ಬ್ಯಾಟ್ ನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿರುವ ಕಿಚ್ಚ ಸುದೀಪ್ ಇದೊಂದು ಅದ್ಭುತ ದಿನ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.