Select Your Language

Notifications

webdunia
webdunia
webdunia
webdunia

ಈ ವರ್ಷ ದಸರಾಗೂ ಸಿನಿಮಾ ಹಬ್ಬ: ಒಂದೇ ದಿನ ರಿಲೀಸ್ ಆಗಲಿವೆ ಭರ್ಜರಿ ಸಿನಿಮಾಗಳು

ಈ ವರ್ಷ ದಸರಾಗೂ ಸಿನಿಮಾ ಹಬ್ಬ: ಒಂದೇ ದಿನ ರಿಲೀಸ್ ಆಗಲಿವೆ ಭರ್ಜರಿ ಸಿನಿಮಾಗಳು
ಬೆಂಗಳೂರು , ಸೋಮವಾರ, 4 ಜುಲೈ 2022 (09:15 IST)
ಬೆಂಗಳೂರು: ದಸರಾ ಹಬ್ಬ ಬಂತೆಂದರೆ ಸಿನಿಮಾಗಳಿಗೂ ಬಿಡುಗಡೆಯ ಸುಗ್ಗಿ ಕಾಲ ಬಂತೆಂದೇ ಅರ್ಥ. ಈ ಬಾರಿಯಂತೂ ಸೂಪರ್ ಹಿಟ್ ಸಿನಿಮಾಗಳ ಜಾತ್ರೆಯೇ ನಡೆಯಲಿದೆ.

ಸೆಪ್ಟೆಂಬರ್ 30 ರಂದು ದಸರಾ ಹಬ್ಬಕ್ಕೆ ಈಗಾಗಲೇ ಒಟ್ಟು ಮೂರು ಪ್ರಮುಖ ಸಿನಿಮಾಗಳು ಬಿಡುಗಡೆ ದಿನಾಂಕ ಘೋಷಿಸಿವೆ. ಜಗ್ಗೇಶ್ ಅಭಿನಯದ ತೋತಾಪುರಿ, ಧ್ರುವ ಸರ್ಜಾ ಅಭಿನಯದ ಮಾರ್ಟಿನ್, ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಸಿನಿಮಾ ಸೆಪ್ಟೆಂಬರ್ 30 ರಂದು ಬಿಡುಗಡೆಯಾಗಲಿದೆ.  ಇನ್ನಷ್ಟು ಸಿನಿಮಾಗಳು ಇದೇ ದಿನ ರಿಲೀಸ್ ದಿನಾಂಕ ಘೋಷಿಸಿದರೂ ಅಚ್ಚರಿಯಿಲ್ಲ.

ದಸರಾ ಹಬ್ಬಕ್ಕೆ ಸಾಲು ಸಾಲು ರಜೆಯಿರುವುದರಿಂದ ಒಂದೇ ದಿನ ಬಿಡುಗಡೆಯಾದರೂ ಸಿನಿಮಾಗಳ ಗಳಿಕೆಗೆ ಪೆಟ್ಟು ಬೀಳಲ್ಲ ಎನ್ನುವುದು ನಿರ್ಮಾಪಕರ ಲೆಕ್ಕಾಚಾರ. ಕಳೆದ ವರ್ಷವೂ ದಸರಾ ಹಬ್ಬಕ್ಕೆ ಒಂದೇ ದಿನ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಮತ್ತು ದುನಿಯಾ ವಿಜಯ್ ಅವರ ಸಲಗ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಂಡಿತ್ತು. ಹೀಗಾಗಿ ದಸರಾ ವೀಕೆಂಡ್ ಎನ್ನುವುದು ನಿರ್ಮಾಪಕರಿಗೆ ಲಾಭ ತಂದುಕೊಡುವ ವೀಕೆಂಡ್ ಎಂದೇ ಲೆಕ್ಕಾಚಾರ ಹಾಕಲಾಗುತ್ತದೆ. ಈ ಕಾರಣಕ್ಕೆ ಒಂದೇ ದಿನ ಹಲವು ಸಿನಿಮಾಗಳು ಬಿಡುಗಡೆಯಾಗುತ್ತವೆ.

Share this Story:

Follow Webdunia kannada

ಮುಂದಿನ ಸುದ್ದಿ

ಬರ್ತ್ ಡೇ ಬಾಯ್ ಪ್ರಜ್ವಲ್ ದೇವರಾಜ್ ಮುಂಬರುವ ಸಿನಿಮಾಗಳ ಲಿಸ್ಟ್