Publish Date: Mon, 04 Jul 2022 (16:01 IST)
Updated Date: Mon, 04 Jul 2022 (16:03 IST)
ಬೆಂಗಳೂರು: 777 ಚಾರ್ಲಿ ಬಿಡುಗಡೆಯಾಗಿ 25 ದಿನಗಳಾಗಿದ್ದು, ಚಿತ್ರತಂಡ ಇದೀಗ ಸಕ್ಸಸ್ ಮೀಟ್ ಆಯೋಜಿಸಿದೆ.
ವಿವಿಧ ಭಾಷೆಗಳಲ್ಲಿ ಬಿಡುಗಡೆಯಾಗಿದ್ದ 777 ಚಾರ್ಲಿ ಸಿನಿಮಾ ಭಾರೀ ಪ್ರಶಂಸೆಗೊಳಗಾಗಿತ್ತು. ಒಂದು ನಾಯಿಯನ್ನಿಟ್ಟುಕೊಂಡು ಸಿನಿಮಾ ಮಾಡುವುದು ಸುಲಭದ ಮಾತಲ್ಲ. ಅಂತಹದ್ದರಲ್ಲಿ ರಕ್ಷಿತ್ ಶೆಟ್ಟಿ ಆಂಡ್ ಟೀಂ ಮಾಡಿದ್ದ ಪ್ರಯತ್ನಕ್ಕೆ ಎಲ್ಲಾ ಭಾಷೆಗಳಿಂದ ಮೆಚ್ಚುಗೆ ವ್ಯಕ್ತಪಡಿಸಿತ್ತು.
ಇದೀಗ ಇಡೀ ಚಿತ್ರತಂಡ ಚಾರ್ಲಿ ಜೊತೆಗೆ ಸಕ್ಸಸ್ ಮೀಟ್ ನಲ್ಲಿ ಭಾಗಿಯಾಗಿದ್ದು, ಚಿತ್ರದ ಯಶಸ್ಸಿಗೆ ಕಾರಣವಾದವರಿಗೆಲ್ಲಾ ಧನ್ಯವಾದ ಸಲ್ಲಿಸಿದೆ. ಜೊತೆಗೆ ಚಿತ್ರೀಕರಣದ ದಿನಗಳನ್ನು ಮತ್ತೆ ಮೆಲುಕು ಹಾಕಿಕೊಂಡು ಖುಷಿಪಟ್ಟಿದೆ.