ಚೆನ್ನೈ: ಸಿನಿಮಾಗಳಲ್ಲಿ ಒಂದು ಧರ್ಮಕ್ಕೆ ಅವಮಾನ ಮಾಡಿ ವಿವಾದವಾಗಿರುವ ಘಟನೆಗಳು ಸಾಕಷ್ಟಿವೆ. ಈಗ ಅಂತಹದ್ದೇ ಒಂದು ಘಟನೆ ನಡೆದಿದೆ.
ಲೀನಾ ಮಣಿಮೇಖಲೈ ಎಂಬ ನಿರ್ದೇಶಕಿ ತಮ್ಮ ಕಾಳಿ ಎನ್ನುವ ಡಾಕ್ಯುಮೆಂಟರಿ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿದ್ದು, ಈ ಪೋಸ್ಟರ್ ನಲ್ಲಿ ಹಿಂದೂಗಳ ಆರಾಧ್ಯ ದೇವತೆ ಕಾಳಿ ದೇವಿಯು ಸಿಗರೇಟು ಸೇದುವಂತೆ ಚಿತ್ರಿಸಲಾಗಿದೆ. ಇದೀಗ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಹಿಂದೂಗಳ ಭಾವನೆಗೆ ಧಕ್ಕೆ ತಂದಿರುವ ಲೀನಾರನ್ನು ಬಂಧಿಸುವಂತೆ ನೆಟ್ಟಿಗರು ಆಗ್ರಹಿಸಿದ್ದಾರೆ. ಕಲೆ ಹೆಸರಿನಲ್ಲಿ ಹಿಂದೂ ದೇವರಿಗೆ ಅವಮಾನ ಮಾಡಿರುವುದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ.