Publish Date: Mon, 04 Jul 2022 (09:55 IST)
Updated Date: Mon, 04 Jul 2022 (10:18 IST)
ಬೆಂಗಳೂರು: ಸಾಯಿ ಪಲ್ಲವಿ ಅಭಿನಯಿಸಿರುವ ಗಾರ್ಗಿ ಸಿನಿಮಾವನ್ನು, ನಿರ್ಮಾಪಕ, ನಟ ರಕ್ಷಿತ್ ಶೆಟ್ಟಿ ಕನ್ನಡದಲ್ಲಿ ಬಿಡುಗಡೆ ಮಾಡುತ್ತಿದ್ದಾರೆ. ಈ ಸಿನಿಮಾವನ್ನು ಕನ್ನಡದಲ್ಲಿ ಬಿಡುಗಡೆ ಮಾಡುತ್ತಿರುವುದಕ್ಕೆ ಕಾರಣವೇನೆಂದು ರಕ್ಷಿತ್ ಶೆಟ್ಟಿ ವಿವರಿಸಿದ್ದಾರೆ.
ಗರುಡಗಮನ ಸಿನಿಮಾ ಬಳಿಕ ನನ್ನ ಮನಕಲಕಿದ ಸಿನಿಮಾ ಇದೇ. ಗಾರ್ಗಿಯ ಧೈರ್ಯ, ಮನಕಲಕುವ ದೃಶ್ಯಗಳು ಹಾಗೂ ಇದನ್ನು ಗೌತಮ್ ಅವುಗಳನ್ನು ರೂಪಿಸಿರುವ ರೀತಿ ಅಚ್ಚುಕಟ್ಟಾಗಿ ಮೂಡಿಬಂದಿದೆ. ಸಾಯಿ ಪಲ್ಲವಿ ಗಾರ್ಗಿ ಪಾತ್ರವನ್ನು ಜೀವಿಸಿ, ನಿಜ ಜೀವನಕ್ಕೆ ಹತ್ತಿರವಿರುವಂತೆ ನಟಿಸಿದ್ದಾರೆ.
ನಮ್ಮ ಚಿತ್ರಗಳನ್ನು ಬೇರೆ ರಾಜ್ಯಗಳಲ್ಲಿ ಬಿಡುಗಡೆ ಮಾಡಲು ಧೈರ್ಯ ಮಾಡುತ್ತಿರುವಾಗ ಬೇರೆ ಭಾಷೆಯ ಚಿತ್ರಗಳನ್ನು ಇಲ್ಲಿಗೆ ತರುವುದು ನಮ್ಮ ಜವಾಬ್ಧಾರಿ. ಗೌತಮ್ ನಮ್ಮ ಬೆಂಗಳೂರಿನವರೆ, ಸಾಯಿ ಪಲ್ಲವಿ ಕೂಡಾ ಕನ್ನಡದಲ್ಲಿ ಧ್ವನಿ ನೀಡಿದ್ದಾರೆ. ಹೀಗಾಗಿ ಚಿತ್ರಕ್ಕೆ ಬೆಂಬಲ ನೀಡಿ ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ.