ಬೆಂಗಳೂರು: 777 ಚಾರ್ಲಿ ಸಿನಿಮಾ ತಂಡ ನಿನ್ನೆ ಸಕ್ಸಸ್ ಮೀಟ್ ಆಯೋಜಿಸಿದ್ದು ಈ ವೇಳೆ ಸಿನಿಮಾ ಕಲೆಕ್ಷನ್ 150 ಕೋಟಿ ರೂ. ತಲುಪಿರುವುದಾಗಿ ಅಧಿಕೃತವಾಗಿ ಘೋಷಿಸಿದೆ.
ನಿರ್ಮಾಪಕ ರಕ್ಷಿತ್ ಶೆಟ್ಟಿ ಈ ಸಿನಿಮಾ ಗಳಿಕೆಯ ಪಾಲು ಚಿತ್ರತಂಡ, ಶ್ವಾನಗಳ ಯೋಗ ಕ್ಷೇಮಕ್ಕಾಗಿ ನೀಡುವುದಾಗಿ ಘೋಷಿಸಿದ್ದಾರೆ. ರಕ್ಷಿತ್ ಈ ತೀರ್ಮಾನಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಒಟ್ಟು ಲಾಭದಲ್ಲಿ ಶೇ.5 ರಷ್ಟು ಬೀದಿ ನಾಯಿಗಳ ಸಂರಕ್ಷಣೆ, ಶೇ.10 ರಷ್ಟು ಚಿತ್ರತಂಡಕ್ಕೆ ಮೀಸಲಿಡಲಾಗುವುದು. ಬೀದಿ ನಾಯಿಗಳನ್ನು ರಕ್ಷಿಸಬೇಕೆಂದು ನಮ್ಮ ಸಿನಿಮಾದಲ್ಲಿ ಸಂದೇಶ ನೀಡಲಾಗಿತ್ತು. ಈಗ ಅದರಂತೆ ನಡೆದುಕೊಳ್ಳುತ್ತಿದ್ದೇವೆ ಎಂದಿದ್ದಾರೆ ರಕ್ಷಿತ್.