Publish Date: Sat, 18 Jan 2020 (09:28 IST)
Updated Date: Sat, 18 Jan 2020 (09:30 IST)
ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಇಂದು ವಾರಂತ್ಯದ ಮಾತುಕತೆಯಲ್ಲಿ ಮನೆಯ ಸದಸ್ಯರಿಗೆ ಎದೆ ಢವ ಢವ ಎನಿಸುವ ಕ್ಷಣ ಎದುರಾಗಲಿದೆ.
ಯಾಕೆಂದರೆ ಈ ವಾರ ಮನೆಯಿಂದ ಇಬ್ಬರು ಸದಸ್ಯರು ಎಲಿಮಿನೇಟ್ ಆಗಲಿದ್ದಾರೆ ಎಂದು ಈ ಮೊದಲೇ ಕಿಚ್ಚ ಸುದೀಪ್ ಹೇಳಿದ್ದರು. ಅದರಂತೆ ಈ ವಾರ ಮನೆಯಿಂದ ಯಾವ ಇಬ್ಬರು ಸದಸ್ಯರು ಹೊರಹೋಗಬಹುದು ಎಂಬ ಕುತೂಹಲ ಮೂಡಿದೆ.
ಈ ವಾರದ ಟಾಸ್ಕ್ ವಿಚಾರದಲ್ಲಿ ವಾಸುಕಿ ವರ್ತನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ ವ್ಯಕ್ತವಾಗಿತ್ತು. ಉಳಿದಂತೆ ಭೂಮಿ ಶೆಟ್ಟಿ, ಚಂದನ್ ಆಚಾರ್, ದೀಪಿಕಾ ದಾಸ್, ಹರೀಶ್ ರಾಜ್, ಕಿಶನ್, ಕುರಿ ಪ್ರತಾಪ್ ಮತ್ತು ಪ್ರಿಯಾಂಕ ಶೈನ್ ಶೆಟ್ಟಿ ಸೇರಿದಂತೆ ಮನೆಯ ಎಲ್ಲಾ ಸದಸ್ಯರೂ ನಾಮಿನೇಟ್ ಆಗಿದ್ದಾರೆ. ಈ ಘಟಾನುಘಟಿಗಳಲ್ಲಿ ಮನೆಯಿಂದ ಹೊರ ಹೋಗುವವರು ಯಾರು ಎಂದು ಕಾದು ನೋಡಬೇಕಿದೆ.