ಜೀ ಕನ್ನಡದಲ್ಲಿ ಜನಪ್ರಿಯ ಗೇಮ್ ಶೋ ಲಾಂಚ್ ಡೇಟ್ ಫಿಕ್ಸ್

ಭಾನುವಾರ, 12 ಜನವರಿ 2020 (09:17 IST)
ಬೆಂಗಳೂರು: ಜೀ ಕನ್ನಡ ವಾಹಿನಿ ಮತ್ತೊಂದು ರಿಯಾಲಿಟಿ ಶೋ ಆರಂಭಿಸಲು ಹೊರಟಿದೆ. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಮುಕ್ತಾಯಗೊಂಡ ಹಿನ್ನಲೆಯಲ್ಲಿ ಮತ್ತೊಂದು ಶೋ ಆರಂಭಿಸುತ್ತಿದೆ.


ಈಗಾಗಲೇ ತಿಳಿಸಿದರೆ ಜೀನ್ಸ್ ಎಂಬ ಗೇಮ್ ಶೋ ಒಂದನ್ನು ಜೀ ಕನ್ನಡ ಆರಂಭಿಸುತ್ತಿದೆ. ಇದು ಮುಂದಿನ ವಾರದಿಂದ ಅಂದರೆ ಜನವರಿ 18 ರಿಂದ ಪ್ರತೀ ಶನಿವಾರ ಸಂಜೆ 6.30 ಕ್ಕೆ ಪ್ರಸಾರವಾಗಲಿದೆ.

ಈಗಾಗಲೇ ರಾಜ್ಯದ ಹಲವೆಡೆ ಆಡಿಷನ್ ನಡೆಸಿ ಸ್ಪರ್ಧಿಗಳನ್ನು ಆಯ್ಕೆ ನಡೆಸಿರುವ ವಾಹಿನಿ ಇದು ಅವಳಿ ಮಕ್ಕಳಿಗಾಗಿ ಇರುವ ಶೋ ಎಂಬ ಸೂಚನೆ ನೀಡಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಸಂಕ್ರಾಂತಿಗೆ ಹೊಸ ಸುದ್ದಿ ಕೊಡಲಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್