Select Your Language

Notifications

webdunia
webdunia
webdunia
webdunia

ಕನ್ನಡ ವಾಹಿನಿಗೆ ಮತ್ತೊಂದು ಡಬ್ಬಿಂಗ್ ಸಿನಿಮಾ

ಕನ್ನಡ ವಾಹಿನಿಗೆ ಮತ್ತೊಂದು ಡಬ್ಬಿಂಗ್ ಸಿನಿಮಾ
ಬೆಂಗಳೂರು , ಸೋಮವಾರ, 6 ಜನವರಿ 2020 (09:38 IST)
ಬೆಂಗಳೂರು: ಥಿಯೇಟರ್ ನಲ್ಲಿ ಡಬ್ಬಿಂಗ್ ಸಿನಿಮಾ ಪ್ರದರ್ಶನಕ್ಕೆ ಹಿಂದೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಆದರೆ ಇತ್ತೀಚೆಗೆ ಸದ್ದಿಲ್ಲದೇ ಕನ್ನಡ ವಾಹಿನಿಗಳ ಮೂಲಕ ಡಬ್ಬಿಂಗ್ ಸಿನಿಮಾ ಕನ್ನಡ ಮಾರುಕಟ್ಟೆಗೆ ಪ್ರವೇಶ ಮಾಡುತ್ತಿದೆ.


ಸೈರಾ ಬಳಿಕ ಮತ್ತೊಂದು ಸಿನಿಮಾ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ತಮಿಳಿನ ಧನುಷ್ ಅಭಿನಯದ ಪಟ್ಟಾಸ್ ಸಿನಿಮಾ ಈಗ ಕನ್ನಡದಲ್ಲಿ ಡಬ್ ಆಗಿ ಟಿವಿಯಲ್ಲಿ ಪ್ರಸಾರವಾಗಲಿದೆ.

ಸೈರಾ ಎಂಬ ತೆಲುಗು ಮೂಲದ ಸಿನಿಮಾ ಕನ್ನಡದಲ್ಲೂ ಬಿಡುಗಡೆಯಾಗಿತ್ತು. ಚಿರಂಜೀವಿ ಸರ್ಜಾ, ಕಿಚ್ಚ ಸುದೀಪ್ ಸೇರಿದಂತೆ ಬಹುತಾರಾಗಣವಿದ್ದ ಸಿನಿಮಾ ಉದಯ ಟಿವಿಯಲ್ಲಿ ಪ್ರಸಾರವಾಗಿತ್ತು. ಈಗ ಪಟ್ಟಾಸ್ ಸಿನಿಮಾದ ಡಬ್ಬಿಂಗ್ ಹಕ್ಕನ್ನೂ ಉದಯ ಟಿವಿಯೇ ಪಡೆದುಕೊಂಡಿದೆ. ಸದ್ಯದಲ್ಲೇ ಇದೂ ಪ್ರಸಾರವಾಗಲಿದೆ. ಅಲ್ಲಿಗೆ ಮತ್ತೊಂದು ಡಬ್ಬಿಂಗ್ ಸಿನಿಮಾ ಕನ್ನಡ ವಾಹಿನಿಯಲ್ಲಿ ಪ್ರಸಾರವಾದಂತಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಗನ ಬಗ್ಗೆ ಇಲ್ಲಸಲ್ಲದ್ದು ಬರೆದರೆ ಅಮ್ಮ ಸುಮಲತಾ ಅಂಬರೀಶ್ ಸುಮ್ಮನೇ ಬಿಟ್ಟಾರೆಯೇ?!