ಬೆಂಗಳೂರು: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರವಾಹಿ ಟಿಆರ್ ಪಿ ವಿಚಾರದಲ್ಲಿ ಕನ್ನಡದ ಎಲ್ಲಾ ಧಾರವಾಹಿಗಳನ್ನೂ ಮೀರಿ ನಂ.1 ಆಗಿತ್ತು.
ಈ ಧಾರವಾಹಿ ಎಲ್ಲಾ ವರ್ಗದ ಪ್ರೇಕ್ಷಕರನ್ನು ಸೆಳೆದಿತ್ತು. ಈಗಲೂ ನಂ.1 ಸ್ಥಾನದಲ್ಲಿಯೇ ಮುಂದುವರಿದಿದೆ. 45 ವರ್ಷದ ಆರ್ಯವರ್ಧನ್ ಆಗಿ ನಟ ಅನಿರುದ್ಧ್ ಮತ್ತು 21 ವರ್ಷದ ಅನು ಸಿರಿಮನೆ ಆಗಿ ಮೇಘಾ ಶೆಟ್ಟಿ ಪ್ರೇಕ್ಷಕರ ಮನ ಗೆದ್ದಿದ್ದಾರೆ.
ಈ ಧಾರವಾಹಿ ಈಗ ತೆಲುಗಿಗೆ ರಿಮೇಕ್ ಆಗುತ್ತಿದೆ. ಸಾಮಾನ್ಯವಾಗಿ ಧಾರವಾಹಿಗಳು ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಡಬ್ಬಿಂಗ್ ಆಗುತ್ತವೆ. ಆದರೆ ಜೊತೆ ಜೊತೆಯಲಿ ಎಂಬ ಮರಾಠಿ ಮೂಲದ ಧಾರವಾಹಿ ಕನ್ನಡದಿಂದ ಇದೀಗ ತೆಲುಗಿಗೆ ರಿಮೇಕ್ ಆಗುತ್ತಿದೆ. ಪಾತ್ರಗಳ ಹೆಸರುಗಳು ಕನ್ನಡದಲ್ಲಿರುವಂತೆಯೇ ಇದೆ. ಈಗಾಗಲೇ ಪ್ರೋಮೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.