Select Your Language

Notifications

webdunia
webdunia
webdunia
webdunia

ಕಿರುತೆರೆಯ ಈ ಎರಡು ಸೂಪರ್ ಹಿಟ್ ಧಾರವಾಹಿಗಳ ನಡುವೆ ಈಗ ಜಟಾಪಟಿ!

ಜೊತೆ ಜೊತೆಯಲಿ
ಬೆಂಗಳೂರು , ಶನಿವಾರ, 4 ಜನವರಿ 2020 (09:14 IST)
ಬೆಂಗಳೂರು: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಎರಡು ಧಾರವಾಹಿಗಳ ನಡುವೆ ಈಗ ರೇಟಿಂಗ್ ವಿಚಾರದಲ್ಲಿ ಭಾರೀ ಪೈಪೋಟಿ ಶುರುವಾಗಿದೆ.


ಅನಿರುದ್ಧ್ ಮತ್ತು ಮೇಘಾ ಶೆಟ್ಟಿ ಅಭಿನಯದ ಜೊತೆ ಜೊತೆಯಲಿ ಮತ್ತು ಗಟ್ಟಿ ಮೇಳ ಧಾರವಾಹಿ ನಡುವೆ ನಂ.1 ಸ್ಥಾನಕ್ಕಾಗಿ ಈಗ ಪೈಪೋಟಿ ನಡೆದಿದೆ.

ಆರಂಭದಲ್ಲಿ ಗಟ್ಟಿಮೇಳ ನಂ.1 ಸ್ಥಾನದಲ್ಲಿತ್ತು. ಆದರೆ ಜೊತೆ ಜೊತೆಯಲಿ ಆರಂಭವಾದ ಮೇಲೆ ಇದು ಎಲ್ಲಾ ವರ್ಗದ ಪ್ರೇಕ್ಷಕರನ್ನೂ ತಟ್ಟಿ ಕನ್ನಡ ಕಿರುತೆರೆಯಲ್ಲೇ ದಾಖಲೆಯ ರೇಟಿಂಗ್ಸ್ ಪಡೆಯಿತು. ಆದರೆ 51 ನೇ ವಾರದ ರೇಟಿಂಗ್ ನಲ್ಲಿ ಎರಡೂ ಧಾರವಾಹಿಗಳು ಕೂದಲೆಳೆಯ ಅಂತರದಲ್ಲಿ ನಂ.1 ಮತ್ತು ನಂ.2 ನೇ ಸ್ಥಾನದಲ್ಲಿವೆ. ಈಗಲೂ ಜೊತೆ ಜೊತೆಯಲಿ ನಂ.1 ಸ್ಥಾನದಲ್ಲಿದ್ದರೂ 14.4 ಟಿವಿಆರ್ ಪಡೆದುಕೊಂಡಿದ್ದರೆ, ಗಟ್ಟಿಮೇಳ ಪೈಪೋಟಿ ನೀಡುತ್ತಿದ್ದ 14.2 ಟಿವಿಆರ್ ಪಡೆದಿದೆ. ಹೀಗಾಗಿ ಈಗ ಎರಡೂ ಧಾರವಾಹಿಗಳ ನಡುವೆ ನಂ.1 ಸ್ಥಾನಕ್ಕಾಗಿ ಭಾರೀ ಸ್ಪರ್ಧೆ ಏರ್ಪಟ್ಟಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಮಿಡಿ ಕಿಲಾಡಿಗಳಿಗೆ ಸರ್ಪ್ರೈಸ್ ಕೊಟ್ಟ ಚಾಲೆಂಜಿಂಗ್ ಸ್ಟಾರ್ ದರ್ಶನ್