Publish Date: Sat, 04 Jan 2020 (10:37 IST)
Updated Date: Sat, 04 Jan 2020 (10:38 IST)
ಬೆಂಗಳೂರು: ಬಿಗ್ ಬಾಸ್ ಮನೆಗೆ ನಿನ್ನೆ ಚಂದನ್ ಆಚಾರ್ ಅಮ್ಮ ಭೇಟಿ ಕೊಟ್ಟಿದ್ದು ಎಲ್ಲರಿಗೂ ಖುಷಿ ನೀಡಿತ್ತು. ಪ್ರೇಕ್ಷಕರಿಗೂ ಚಂದನ್ ಅಮ್ಮ ನಡೆದುಕೊಂಡ ರೀತಿ ನಿಜಕ್ಕೂ ಖುಷಿಯಾಗಿದೆ.
ಚಂದನ್ ಟಾಸ್ಕ್ ಸಂದರ್ಭದಲ್ಲಿ ಎಷ್ಟೇ ರಗಳೆ ಮಾಡಿಕೊಂಡು ಮನೆಯ ಇತರ ಸದಸ್ಯರ ಜತೆ ಸಂಬಂಧ ಚೆನ್ನಾಗಿಲ್ಲದೇ ಇದ್ದರೂ ಅವರ ಅಮ್ಮ ಮಾತ್ರ ಎಲ್ಲರ ಜತೆ ಸ್ನೇಹದಿಂದ ಮಾತನಾಡಿ ಕೊನೆಗೆ ಎಲ್ಲರೂ ಚೆನ್ನಾಗಿ ಆಡಿ, ಚೆನ್ನಾಗಿರಿ ಎಂದು ಹೇಳಿದ್ದು ಪ್ರೇಕ್ಷಕರಿಗೂ ಇಷ್ಟವಾಗಿದೆ. ಅಷ್ಟೇ ಅವರ ಮೃದು ಮಾತುಗಳನ್ನು ನೋಡಿ ಎಲ್ಲರೂ ಖುಷಿಪಟ್ಟಿದ್ದಾರೆ.
ಕೆಲವು ಪ್ರೇಕ್ಷಕರಂತೂ ಸಾಮಾಜಿಕ ಜಾಲತಾಣದಲ್ಲಿ ಚಂದನ್ ಅಮ್ಮನ ನೋಡಿ ದೀಪಿಕಾ ದಾಸ್ ಅಮ್ಮ ಮೀಡಿಯಾ ಎದುರು ಹೇಗಿರಬೇಕು ಎಂದು ಕಲಿಯಬೇಕು ಎಂದು ಟಾಂಗ್ ಕೊಟ್ಟಿದ್ದಾರೆ. ದೀಪಿಕಾ ಅಮ್ಮ ಮನೆಗೆ ಬಂದಾಗ ಮಗಳಿಗೆ ಮರ್ಯಾದೆ ತೆಗಿಯುವ ಕೆಲಸ ಮಾಡಬೇಡ ಎಂದು ಸ್ಟ್ರಿಕ್ಟ್ ಆಗಿ ನಡೆದುಕೊಂಡಿದ್ದು ಎಲ್ಲರಿಗೂ ಅಷ್ಟು ಇಷ್ಟವಾಗಿಲ್ಲ. ಆದರೆ ಚಂದನ್ ಅಮ್ಮ ಮನಸ್ಸಲ್ಲಿ ಏನೂ ಇಟ್ಟುಕೊಳ್ಳದೇ ಎಲ್ಲರನ್ನೂ ಪ್ರೀತಿಯಿಂದ ಮಾತನಾಡಿಸಿದ್ದು, ಅಮ್ಮ ಅಂದರೆ ಹೀಗಿರಬೇಕು ಎಂದು ಪ್ರೇಕ್ಷಕರಿಂದ ಹೊಗಳಿಸಿಕೊಂಡಿದ್ದಾರೆ.