Select Your Language

Notifications

webdunia
webdunia
webdunia
webdunia

ಟಿವಿಯಲ್ಲಿ ಇನ್ನೆರಡು ವಾರ ಹೊಸ ಸಿನಿಮಾಗಳ ಭರಾಟೆ

ಟಿವಿಯಲ್ಲಿ ಇನ್ನೆರಡು ವಾರ ಹೊಸ ಸಿನಿಮಾಗಳ ಭರಾಟೆ
ಬೆಂಗಳೂರು , ಶುಕ್ರವಾರ, 10 ಜನವರಿ 2020 (09:02 IST)
ಬೆಂಗಳೂರು: ಕನ್ನಡ ಕಿರುತೆರೆಯಲ್ಲಿ ಇತ್ತೀಚೆಗಷ್ಟೇ ಬಿಡುಗಡೆಯಾದ ಸಿನಿಮಾಗಳು ಕೆಲವೇ ದಿನಗಳಲ್ಲಿ ಬಿಡುಗಡೆಯಾಗುವುದು ಹೊಸದೇನಲ್ಲ. ಆದರೆ ಈ ವಾರ ಮತ್ತು ಮುಂದಿನ ವಾರ ಟಿವಿ ಪ್ರೇಕ್ಷಕರಿಗೆ ಹಬ್ಬವಾಗಲಿದೆ.


ಈ ಭಾನುವಾರ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಇದೇ ಮೊದಲ ಬಾರಿಗೆ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದೆ. ಇದೇ ದಿನ ಸಂಜೆ 6 ಗಂಟೆಗೆ ಉದಯ ಟಿವಿಯಲ್ಲಿ ನೀನಾಸಂ ಸತೀಶ್ ಮತ್ತು ಅದಿತಿ ಪ್ರಭುದೇವ ಅಭಿನಯದ ‘ಬ್ರಹ್ಮಚಾರಿ’ ಸಿನಿಮಾ ಪ್ರಸಾರವಾಗಲಿದೆ.

ಮುಂದಿನ ವಾರ ಅಂದರೆ ಜನವರಿ 19 ರಂದು ಭಾನುವಾರ ಸಂಜೆ 5.30 ಕ್ಕೆ ಸ್ಟಾರ್ ಸುವರ್ಣ ವಾಹಿನಿ ರೋರಿಂಗ್ ಸ್ಟಾರ್ ಶ್ರೀ ಮುರಳಿ ಅಭಿನಯದ ‘ಭರಾಟೆ’ ಸಿನಿಮಾ ಇದೇ ಮೊದಲ ಬಾರಿಗೆ ಕಿರುತೆರೆಯಲ್ಲಿ ಪ್ರಸಾರ ಮಾಡುತ್ತಿದೆ. ಅಲ್ಲಿಗೆ ಮುಂದಿನ ಎರಡು ವಾರ ಕಿರುತೆರೆಯಲ್ಲಿ ಹೊಚ್ಚ ಹೊಸ ಧಾರವಾಹಿಗಳ ಧಮಾಕ ನಡೆಯಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜಕೀಯ ಕಿತ್ತಾಟದಲ್ಲಿ ಗಾಯಕ ವಿಜಯ್ ಪ್ರಕಾಶ್ ಗೆ ಅವಮಾನ