ಬಿಗ್ ಬಾಸ್: ಕಿಚ್ಚ ಸುದೀಪ್ ಕೊಟ್ಟ ಶಾಕ್ ಗೆ ಪ್ರಿಯಾಂಕ, ಭೂಮಿ ಬೇಸ್ತು!

ಸೋಮವಾರ, 13 ಜನವರಿ 2020 (10:06 IST)
ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಈ ವಾರ ಎಲಿಮಿನೇಷನ್ ಇಲ್ಲ ಎಂದು ಕಿಚ್ಚ ಸುದೀಪ್ ಹೇಳಿದ್ದರೂ ಮನೆಯ ಸದಸ್ಯರಿಗೆ ಇದರ ಅರಿವಿರಲಿಲ್ಲ. ಹೀಗಾಗಿ ಕಿಚ್ಚ ಮನೆಯ ಸದಸ್ಯರನ್ನು ಸರಿಯಾಗಿಯೇ ಬೇಸ್ತು ಬೀಳಿಸಿದ್ದಾರೆ.


ಈ ವಾರ ಎಲಿಮಿನೇಷನ್ ಇಲ್ಲ ಎಂಬ ಅರಿವಿರದ ಸದಸ್ಯರು ಯಾರು ಹೊರ ಹೋಗುತ್ತಾರೋ ಎಂಬ ಭೀತಿಯಲ್ಲಿದ್ದರು. ಕೊನೆಯಲ್ಲಿ ಸುದೀಪ್ ಪ್ರಿಯಾಂಕ ಮತ್ತು ಭೂಮಿ ಶೆಟ್ಟಿ ಇಬ್ಬರೂ ಈ ವಾರ ಮನೆಯಿಂದ ಎಲಿಮಿನೇಟ್ ಆಗುತ್ತೀರಿ ಎಂದರು.

ಇದನ್ನು ಕೇಳಿ ಇಬ್ಬರೂ ಶಾಕ್ ಆದರಲ್ಲದೆ, ಅತ್ತು ಕರೆದು ಇನ್ನು ಮುಂದೆ ಬಿಗ್ ಬಾಸ್ ಮಿಸ್ ಮಾಡಿಕೊಳ್ಳುತ್ತೇವೆ ಎಂದು ಹೊರ ಹೋಗಲು ಸಿದ್ಧರಾಗಿದ್ದರು. ಆ ವೇಳೆ ಕಿಚ್ಚ ಮತ್ತೊಂದು ಶಾಕ್ ಕೊಟ್ಟಿದ್ದು ಯಾರೂ ಹೊರಹೋಗಬೇಕಿಲ್ಲ ಎಂದರು. ಕಿಚ್ಚ ಕೊಟ್ಟ ಶಾಕ್ ಗೆ ಮನೆಯವರೆಲ್ಲಾ ಶಾಕ್ ಆದರು. ಸುಧಾರಿಸಿಕೊಳ್ಳಲು ಕೆಲವು ಸಮಯವೇ ಹಿಡಿಯಿತು. ಆದರೆ ಮನೆಯವರು ನಿರಾಳವಾಗಬೇಕಿಲ್ಲ. ಯಾಕೆಂದರೆ ಮುಂದಿನ ವಾರ ಡಬಲ್ ಎಲಿಮಿನೇಷನ್ ಗ್ಯಾರಂಟಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಚಂದನ್ ಶೆಟ್ಟಿ-ನಿವೇದಿತಾ ಗೌಡ ಮದುವೆ ದಿನಾಂಕ ಫಿಕ್ಸ್