Select Your Language

Notifications

webdunia
webdunia
webdunia
webdunia

ಕಿಚ್ಚ ಸುದೀಪ್ ಗೆ ಬಾಲಿವುಡ್ ತಾರೆ ಕಾಜೋಲ್ ಥ್ಯಾಂಕ್ಸ್ ಹೇಳಿದ್ದೇಕೆ ಗೊತ್ತಾ?

ಕಿಚ್ಚ ಸುದೀಪ್ ಗೆ ಬಾಲಿವುಡ್ ತಾರೆ ಕಾಜೋಲ್ ಥ್ಯಾಂಕ್ಸ್ ಹೇಳಿದ್ದೇಕೆ ಗೊತ್ತಾ?
ಬೆಂಗಳೂರು , ಬುಧವಾರ, 8 ಜನವರಿ 2020 (09:33 IST)
ಬೆಂಗಳೂರು: ಕಿಚ್ಚ ಸುದೀಪ್ ಕೇವಲ ಕನ್ನಡ ಸಿನಿಮಾಗೆ ಸೀಮಿತವಾಗಿಲ್ಲ. ಬಾಲಿವುಡ್ ನಲ್ಲೂ ಮಿಂಚಿದವರು. ಇದೀಗ ಸ್ಯಾಂಡಲ್ ವುಡ್ ನ ಅಭಿನಯ ಚಕ್ರವರ್ತಿಗೆ ಬಾಲಿವುಡ್ ಎವರ್ ಗ್ರೀನ್ ಹೀರೋಯಿನ್ ಕಾಜೋಲ್ ಥ್ಯಾಂಕ್ಸ್ ಹೇಳಿದ್ದಾರೆ. ಇದಕ್ಕೆ ಕಾರಣವೇನು ಗೊತ್ತಾ?


ದಬಾಂಗ್ 3 ಸಿನಿಮಾ ಬಿಡುಗಡೆಗೆ ಮುನ್ನ ಕಿಚ್ಚ ಸಂದರ್ಶನವೊಂದರಲ್ಲಿ ಪಾಲ್ಗೊಂಡಿದ್ದರು. ಆ ವೇಳೆ ಕಿಚ್ಚನಿಗೆ ಬಾಲಿವುಡ್ ನಲ್ಲಿ ನಿಮ್ಮ ಫೇವರಿಟ್ ಹೀರೋಯಿನ್ ಯಾರು ಎಂದು ಕೇಳಿದಾಗ ಕಾಜೋಲ್ ಅಂದರೆ ನನಗೆ ತುಂಬಾ ಇಷ್ಟ. ಅವರ ಆರಾಧಕ ನಾನು ಎಂದಿದ್ದರಂತೆ.

ಇದೇ ಸಂದರ್ಶಕರು ಇದೀಗ ಕಾಜೋಲ್ ಮತ್ತು ಪತಿ ಅಜಯ್ ದೇವಗನ್ ಅವರ ಸಂದರ್ಶನ ನಡೆಸುವಾಗ ಈ ವಿಚಾರವನ್ನು ಉಲ್ಲೇಖಿಸಿದ್ದಾರೆ. ಇದರಿಂದ ಖುಷಿಯಾದ ಕಾಜೋಲ್, ಕಿಚ್ಚನಿಗೆ ಧನ್ಯವಾದ ಹೇಳಿದ್ದಾರೆ. ‘ಥ್ಯಾಂಕ್ಯೂ ಕಿಚ್ಚ. ನೀವು ಎಲ್ಲೇ ಇದ್ದರೂ ನಿಮಗೆ ಧನ್ಯವಾದ. ನಿಮಗೆ ಒಳ್ಳೆ ಟೇಸ್ಟ್ ಇದೆ’ ಎಂದು ಕಾಜೋಲ್ ನಗುತ್ತಲೇ ಧನ್ಯವಾದ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಬರ್ತ್ ಡೇಗೆ ದಾಖಲೆ ಮಾಡಲು ಹೊರಟಿರುವ ಅಭಿಮಾನಿಗಳು