Publish Date: Sat, 04 Jan 2020 (12:13 IST)
Updated Date: Sat, 04 Jan 2020 (12:15 IST)
ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ಅಭಿನಯದ ಸಿನಿಮಾ ಎಂದರೆ ಅದರ ಅಬ್ಬರವೇ ಬೇರೆ ರೀತಿ. ಇದೀಗ ರಜನಿ ಅಭಿಮಾನಿಗಳು ಮತ್ತೆ ಸಂಭ್ರಮಿಸುವ ಸಮಯ ಬಂದಿದೆ.
ತಲೈವಾ ರಜನಿ ಅಭಿನಯದ ‘ದರ್ಬಾರ್’ ಸಿನಿಮಾ ವೀಕ್ಷಿಸಿದ ಸೆನ್ಸಾರ್ ಮಂಡಳಿ ಯು/ಎ ಸರ್ಟಿಫಿಕೇಟ್ ನೀಡಿದೆ. ಜನವರಿ 9 ರಿಂದ ರಜನಿ ಸಿನಿಮಾ ತೆರೆಗೆ ಬರಲಿದೆ.
ಈಗಾಗಲೇ ತಮಿಳುನಾಡು ಮಾತ್ರವಲ್ಲದೆ, ಕರ್ನಾಟಕದಲ್ಲೂ ದರ್ಬಾರ್ ಹವಾ ಜೋರಾಗಿಯೇ ಇದೆ. ಚಿತ್ರ ವೀಕ್ಷಿಸಿದ ಸೆನ್ಸಾರ್ ಮಂಡಳಿ ಕಿಸ್ಸಿಂಗ್ ಸೀನ್ ಸೇರಿದಂತೆ ಒಟ್ಟು 11 ದೃಶ್ಯಗಳಿಗೆ ಕತ್ತರಿ ಹಾಕಿದೆ.